Select Your Language

Notifications

webdunia
webdunia
webdunia
webdunia

ಬಾಕ್ಸಿಂಗ್ ಲೆಜೆಂಡ್ ಮಹಮ್ಮದ್ ಅಲಿಗೆ ಅಂತಿಮ ನಮನ

Muhammad Ali
ಲೂವಿಸಿಲ್ಲೆ , ಶುಕ್ರವಾರ, 10 ಜೂನ್ 2016 (17:33 IST)
ಬಾಕ್ಸಿಂಗ್ ಲೆಜೆಂಡ್  ಮೊಹಮ್ಮದ್ ಅಲಿ ಅಂತ್ಯಕ್ರಿಯೆ ಶುಕ್ರವಾರ ನೆರವೇರಿದ್ದು, ಜಗತ್ತಿನಾದ್ಯಂತ ಬಾಕ್ಸಿಂಗ್ ಪ್ರಿಯರಿಗೆ ಸಂಚಲನ ಮೂಡಿಸಿದ ಅಲಿ ಅಂತ್ಯಕ್ರಿಯೆಗೆ  ತವರುನಗರ ಲೂವಿಸಿಲ್ಲೆಯಲ್ಲಿ ಸಾವಿರಾರು ಜನರು ನೆರೆದು ಅಂತಿಮ ನಮನ ಸಲ್ಲಿಸಿದರು. ಮೂರು ಬಾರಿ ಹೆವಿವೇಟ್ ವಿಶ್ವ ಚಾಂಪಿಯನ್ ಅಲಿ ಸುದೀರ್ಘ ಕಾಲ ಪಾರ್ಕಿನ್‌ಸನ್ ಕಾಯಿಲೆ ಜತೆ ಸೆಣಸಾಡಿ ಕಳೆದ ವಾರ ಮೃತಪಟ್ಟಿದ್ದರು.
 
 
ಬೆಳಿಗ್ಗೆ 9 ಗಂಟೆಗೆ ಆರಂಭವಾದ ಅಂತ್ಯಕ್ರಿಯೆ ಮೆರವಣಿಗೆ ಅಲಿಗೆ ಸ್ಮರಣೀಯ ಸ್ಥಳಗಳಾದ ಬಾಲ್ಯದ ಮನೆ, ಆಫ್ರಿಕನ್ ಅಮೆರಿಕನ್ ಪರಂಪರೆ ಕೇಂದ್ರದ ಮೂಲಕ ಹಾದು ಕೇವ್ ಹಿಲ್ ಶವಾಗಾರದಲ್ಲಿ ಸಮಾಧಿ ಮಾಡಲಾಯಿತು.
 
ಬೆಳ್ಳಿ ತೆರೆಯಲ್ಲಿ ಅಲಿಯ ಪಾತ್ರವನ್ನು ನಟಿಸಿದ ಆಸ್ಕರ್ ನಾಮಾಂಕಿತ ನಟ ವಿಲ್ ಸ್ಮಿತ್ ಮತ್ತು ಮಾಜಿ ಹೆವಿವೇಟ್ ಚಾಂಪಿಯನ್ ಲೆನಾಕ್ಸ್ ಲೆವಿಸ್ ಅಲಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪಾಂಡೆ ಬಯಕೆ