ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಿನ್ನೆ ಒಂದೇ ದಿನ ಭಾರತಕ್ಕೆ ನಾಲ್ಕು ಪದಕಗಳು ಒಲಿದಿವೆ.
49 ಕೆ.ಜಿ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾ ಬಾಯಿ ಚಾನು ಚಿನ್ನ ಗೆದ್ದು ದೇಶಕ್ಕೆ ಮೊದಲ ಚಿನ್ನದ ಪದಕದ ಗೌರವ ತಂದಿದ್ದಾರೆ. ಇನ್ನೊಬ್ಬ ತಾರೆ ಬಿಂದ್ಯಾ ರಾಣಿ 55 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ 61 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. 55 ಕೆ.ಜಿ. ವಿಭಾಗದಲ್ಲಿ ಸಂಕೇತ್ ಸಾಗರ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ನಿನ್ನೆ ವೈಟ್ ಲಿಫ್ಟಿಂಗ್ ವಿಭಾಗದ ಮೂಲಕವೇ ಭಾರತಕ್ಕೆ ನಾಲ್ಕು ಪದಕ ಒಲಿದುಬಂದಿದೆ.