ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್​ ಟೂರ್ನಿ: ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು

sampriya
ಶನಿವಾರ, 25 ಮೇ 2024 (19:50 IST)
Photo By X
ಕೌಲಾಲಂಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್​ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಹಾಕಿದರು.

ಕೌಲಾಲಂಪುರದಲ್ಲಿ ಶನಿವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತ ಸಿಂಧು ಅವರು ಫೈನಲ್‌ ಪ್ರವೇಶಿಸಿದ್ದಾರೆ. 88 ನಿಮಿಷಗಳ ಕಾಲ ನಡೆದ ಜಿದ್ದಾ-ಜಿದ್ದಿ ಹೋರಾಟದಲ್ಲಿ ವಿಶ್ವದ 20ನೇ ಶ್ರೇಯಾಂಕಿತ ಬುಸಾನನ್ ವಿರುದ್ಧ 13-21 21-16 21-12 ಅಂಕಗಳೊಂದಿಗೆ ಗೆಲುವು ಸಾಧಿಸಿದರು.

ಇದು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಲ್ಲಿ ಸಿಂಧು ಅವರ ವೃತ್ತಿಜೀವನದ ನಾಲ್ಕನೇ ಫೈನಲ್ ಆಗಿದೆ. ಇದೀಗ ಸಿಂಧು ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಾಂಗ್ ಕ್ಸಿ ಯಿ ಅವರನ್ನು ಎದುರಿಸಬೇಕಾಗಿದೆ.

ಎರಡು ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ 15ನೇ ಶ್ರೇಯಾಂಕದ ಆಟಗಾರ್ತಿ ಸಿಂಧುಗೆ ಈ ಗೆಲುವು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup Final: ಸ್ಪಿನ್ ಸುಳಿಗೆ ಪಾಕ್‌ ತತ್ತರ: ಭಾರತದ ಗೆಲುವಿಗೆ ಸಾಧಾರಣ ಸವಾಲು

Asia Cup Cricket: ಭಾರತಕ್ಕೆ ಶಾಕ್‌: ಫೈನಲ್‌ಗೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅಲಭ್ಯ

ಬಿಸಿಸಿಐ ಸಾರಥಿಯಾಗಿ ಮಿಥುನ್ ಮನ್ಹಾಸ್ ನೇಮಕ: ಕರ್ನಾಟಕದ ರಘುರಾಮ್ ಭಟ್ ಖಜಾಂಚಿ

Asia Cup Cricket: ಫೈನಲ್‌ನಲ್ಲಿ ಭಾರತ–ಪಾಕ್‌ ಮೊದಲ ಬಾರಿ ಮುಖಾಮುಖಿಗೆ ವೇದಿಕೆ ಸಜ್ಜು

ಅಭಿಷೇಕ್ ಬಚ್ಚನ್ ಔಟ್ ಮಾಡಿ ಎಂದ ಶೊಯೇಬ್ ಅಖ್ತರ್: ಬಚ್ಚನ್ ಫನ್ನಿ ರಿಯಾಕ್ಷನ್ ನೋಡಿ

ಮುಂದಿನ ಸುದ್ದಿ
Show comments