Select Your Language

Notifications

webdunia
webdunia
webdunia
webdunia

ಬಾಲ್ಯದ ಗೆಳತಿ ಅಂಟೋನೆಲ್ಲಾ ರೋಕುಝೋಳನ್ನು ವಿವಾಹವಾದ ಲಿಯೋನೆಲ್ ಮೆಸ್ಸಿ

ಬಾಲ್ಯದ ಗೆಳತಿ ಅಂಟೋನೆಲ್ಲಾ ರೋಕುಝೋಳನ್ನು ವಿವಾಹವಾದ ಲಿಯೋನೆಲ್ ಮೆಸ್ಸಿ
ಅರ್ಜಿಂಟಿನಾ , ಶನಿವಾರ, 1 ಜುಲೈ 2017 (19:22 IST)
ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ಬಾಲ್ಯದ ಗೆಳತಿ, ಪ್ರಿಯತಮೆ ಅಂಟೋನೆಲ್ಲಾ ರೋಕುಝೋ ಅವರನ್ನು ವಿವಾಹವಾಗಿದ್ದಾರೆ. ವಿವಾಹ ಸಮಾರಂಭದಲ್ಲಿ ಕೆಲ ಖ್ಯಾತ ಫುಟ್ಬಾಲ್ ಆಟಗಾರರು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. 
 
ನಗರದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಲಿಯೋನೆಲ್ ಮೆಸ್ಸಿ ಮತ್ತು ಅಂಟೋನೆಲ್ಲಾ ರೋಕುಝೋ ವಿವಾಹ ಸಮಾರಂಭಕ್ಕೆ ಬಾರ್ಸಿಲೋನಾ ತಂಡದ ನೆಮಾರ್, ಲೂಯಿುಸ್ ಸುವಾರೆಜ್ ಮತ್ತು ಗೆರಾರ್ಡ್ ಪಿಗ್ವೆ ಮತ್ತು ಕೊಲಂಬಿಯಾದ ಖ್ಯಾತ ಪಾಪ್ ಸ್ಟಾರ್ ಶಕೀರಾ ಸೇರಿದಂತೆ 250 ಅತಿಥಿಗಳು ಆಗಮಿಸಿ ವಧು ವರರಿಗೆ ಶುಭ ಕೋರಿದರು.  
 
ಅರ್ಜೆಂಟೈನಾದ ಕೃಷಿ ಕೇಂದ್ರ ಮತ್ತು ದೇಶದ ಮೂರನೆಯ ಅತಿದೊಡ್ಡ ನಗರ ಬ್ಯೂನಸ್‌ ಐರಿಸ್‌ನಿಂದ 300 ಕಿ.ಮೀ ದೂರದಲ್ಲಿರುವ ರೋಸಾರಿಯೋದಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. 
 
ಸುಮಾರು 150 ಪತ್ರಕರ್ತರಿಗೆ ವಿವಾಹ ಸಮಾರಂಭ ವರದಿಗಾಗಿ ಅವಕಾಶ ನೀಡಲಾಯಿತು, ಆದರೆ, ನೇರವಾಗಿ ವೇದಿಕೆಯ ಮೇಲಿದ್ದ ವಧು ವರರ ಕಾರ್ಯಕ್ರಮದಿಂದ ದೂರವಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
 
ಸಾಕರ್ ತಾರೆಗಳ ಛಾಯಾಚಿತ್ರಗಳನ್ನು ಚಿತ್ರೀಕರಿಸಲು ಆಶಯದೊಂದಿಗೆ ಭಾರಿ ಕಾವಲಿರುವ ಸೈಟ್ ಬಳಿ ವಿವಾಹದ ಮೊದಲು ಕ್ಯೂರಿಯಸ್ ನೋಡುಗರು ಕೂಡಿಬಂದರು.
 
ಲಿಯೋನೆಲ್ ಮೆಸ್ಸಿ ವಿವಾಹ ಸಮಾರಂಭ ನಡೆಯುತ್ತಿದೆ ಎನ್ನುವ ಮಾಹಿತಿ ಪಡೆದ ಸ್ಥಳೀಯರು ಹೋಟೆಲ್‌ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು
 
ಮೆಸ್ಸಿ ವಿವಾಹಕ್ಕಾಗಿ ರೋಸಾರಿಯೋ ನಗರಕ್ಕೆ ಆಗಮಿಸಿರುವುದು ಸಂತೋಷ ತಂದಿದೆ ಎಂದು ಸ್ಥಳೀಯರಾದ ಜ್ಯೂಲಿಯೋ ಸೋಸಾ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇತಿಹಾಸ ನಿರ್ಮಿಸಿದ ಧೋನಿ