Select Your Language

Notifications

webdunia
webdunia
webdunia
webdunia

ಇಂದಿನಿಂದ ಲೇ ಪಂಗಾ ಎನ್ನಿ..!

ಇಂದಿನಿಂದ ಲೇ ಪಂಗಾ ಎನ್ನಿ..!
ಹೈದರಾಬಾದ್ , ಶುಕ್ರವಾರ, 28 ಜುಲೈ 2017 (09:24 IST)
ಹೈದರಾಬಾದ್: ಮತ್ತೊಂದು ಪ್ರೊ ಕಬಡ್ಡಿ ಚಾಂಪಿಯನ್ ಶಿಪ್ ಗೆ ಇಂದಿನಿಂದ ಚಾಲನೆ ದೊರೆಯಲಿದೆ. ಭಾರತದ ದೇಶೀಯ ಕ್ರೀಡೆಯ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿರುವ ಪ್ರೊ ಕಬಡ್ಡಿ ಕೂಟ ಇಂದು ಹೈದರಾಬಾದ್ ನಲ್ಲಿ ಆರಂಭವಾಗಲಿದೆ.


ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಮತ್ತು ತಮಿಳ್ ತಲೈವಾಸ್ ನಡುವೆ ನಡೆಯಲಿದೆ. ಇದಕ್ಕೂ ಮೊದಲು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್, ಟಾಲಿವುಡ್, ಸೇರಿದಂತೆ ಸಿನಿ ಕಲಾವಿದರ ದಂಡೇ ಆಗಮಿಸಲಿದೆ. ವರ್ಣ ರಂಜಿತ ಕಾರ್ಯಮ ನಡೆಯಲಿದೆ.

ಈ ಬಾರಿ ಮತ್ತೆ ಹೊಸದಾಗಿ ನಾಲ್ಕು ತಂಡಗಳ ಸೇರ್ಪಡೆಯಾಗಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು, ಬಂಗಾಳ, ತೆಲುಗು, ಯು ಮುಂಬಾ, ದಬಾಂಗ್ ಡೆಲ್ಲಿ, ಪುನೇರಿ ಪಲ್ಟಾನ್ಸ್ , ಪಾಟ್ನಾ, ಮತ್ತು ಜೈಪುರ್ ತಂಡಗಳು ಸೆಣಸಿದ್ದವು. ಈ ಬಾರಿ ತಮಿಳು, ಉತ್ತರ ಪ್ರದೇಶ, ಹರ್ಯಾಣ ಮತ್ತು ಗುಜರಾತ್ ತಂಡಗಳು ಸೇರ್ಪಡೆಯಾಗಿವೆ.

ಒಟ್ಟು 13 ವಾರ 138 ಪಂದ್ಯಗಳು ನಡೆಯಲಿವೆ. ಹೊಸದಾಗಿ ನಾಲ್ಕು ತಂಡ ಸೇರಿರುವುದರಿಂದ ಕೂಟ ಸ್ವಲ್ಪ ಸುದೀರ್ಘವಾಗಿದೆ. ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ತಂಡ ಲಿಗ್ ಹಂತದಲ್ಲಿ 22 ಪಂದ್ಯಗಳನ್ನಾಡಲಿದೆ. ನಂತರ ಪ್ಲೇ ಆಪ್ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳನ್ನು ರಾತ್ರಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ!