Select Your Language

Notifications

webdunia
webdunia
webdunia
webdunia

ತೆರಿಗೆ ಪಾವತಿಸದ ವಿವಾದ: ಸಾನಿಯಾ ಮಿರ್ಜಾ ವಿಚಾರಣೆಗೆ ಹಾಜರಾಗದಿರಲು ಕಾರಣ ಇದು!

ತೆರಿಗೆ ಪಾವತಿಸದ ವಿವಾದ: ಸಾನಿಯಾ ಮಿರ್ಜಾ ವಿಚಾರಣೆಗೆ ಹಾಜರಾಗದಿರಲು ಕಾರಣ ಇದು!
NewDelhi , ಬುಧವಾರ, 15 ಫೆಬ್ರವರಿ 2017 (12:33 IST)
ನವದೆಹಲಿ: ಆದಾಯ ತೆರಿಗೆ ಪಾವತಿಸದೇ ಇರುವ ಕಾರಣಕ್ಕೆ ತೆರಿಗೆ ಇಲಾಖೆ ಇತ್ತೀಚೆಗಷ್ಟೇ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೋಟಿಸು ಜಾರಿ ಮಾಡಿತ್ತು. ಆದರೆ ನೋಟೀಸಿನಲ್ಲಿ ತಿಳಿಸಿದಂತೆ ವಿಚಾರಣೆಗೆ ಹಾಜರಾಗಲು ಸಾನಿಯಾ ನಿರಾಕರಿಸಿದ್ದಾರೆ. ಅದಕ್ಕೆ ಕಾರಣವೂ ಇದೆ.

 
“ಸಾನಿಯಾ ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅಲ್ಲಿಂದ ಅಮೆರಿಕಾಕ್ಕೆ ತೆರಳಲಿದ್ದಾರೆ. ಹೀಗಾಗಿ ಅವರು ತೆರಿಗೆ ಇಲಾಖೆ ಹೇಳಿದ ಸಮಯಕ್ಕೆ ಅಧಿಕಾರಗಳ ಎದುರು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಸಾಧ್ಯವಿಲ್ಲ. ಆಕೆಯ ಬದಲಿಗೆ ಪ್ರತಿನಿಧಿಗಳು ಹಾಜರಾಗಲಿದ್ದಾರೆ” ಎಂದು ಮೂಲಗಳು ಹೇಳಿವೆ.

ತೆಲಂಗಾಣ ಸರ್ಕಾರದ ರಾಯಭಾರಿಯಾಗಿ ಆಯ್ಕೆಯಾಗಿದ್ದ ಸಾನಿಯಾ ಮಿರ್ಜಾ ಬಹುಮಾನ ರೂಪದಲ್ಲಿ ಹಣ ಪಡೆದಿದ್ದರು. ಈ ಪೈಕಿ ತೆರಿಗೆ ಇಲಾಖೆಗೆ 1 ಕೋಟಿ ರೂ.ಗಳಷ್ಟು ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ ಎಂಬುದು ಅವರ ಮೇಲಿನ ಆರೋಪ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೂಸುಫ್ ಪಠಾಣ್ ವಿದೇಶೀ ಲೀಗ್ ನಲ್ಲಿ ಆಡುವ ಕನಸಿಗೆ ತಣ್ಣೀರೆರಚಿದ ಬಿಸಿಸಿಐ