Select Your Language

Notifications

webdunia
webdunia
webdunia
webdunia

ಐಎಸ್‌ಎಲ್: ಡೆಲ್ಲಿ ಡೈನಾಮೋಸ್ ಕೋಚ್ ಹುದ್ದೆಗೆ ಜಾಂಬ್ರೋಟಾ ಆಯ್ಕೆ

ಐಎಸ್‌ಎಲ್:  ಡೆಲ್ಲಿ ಡೈನಾಮೋಸ್ ಕೋಚ್ ಹುದ್ದೆಗೆ ಜಾಂಬ್ರೋಟಾ ಆಯ್ಕೆ
ನವದೆಹಲಿ: , ಮಂಗಳವಾರ, 5 ಜುಲೈ 2016 (19:22 IST)
ಇಟಲಿಯ ವಿಶ್ವಕಪ್ ವಿಜೇತ ತಂಡದ ಆಟಗಾರ ಜಿಯಾನ್‌ಲುಕಾ ಜಾಂಬ್ರೋಟಾ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಮೂರನೇ ಸೀಸನ್‌ಗೆ ಮುನ್ನ ಡೆಲ್ಲಿ ಡೈನಾಮೋಸ್ ತಂಡದ ಹೆಚ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.  

ಇಟಲಿಯ 2006ರ ವಿಶ್ವಕಪ್ ವಿಜೇತ ತಂಡದಲ್ಲಿ ಜಾಂಬ್ರೋಟಾ ಮತ್ತೊಂದು ವಿಶ್ವಕಪ್ ವಿಜೇತ ತಂಡದಲ್ಲಿದ್ದ ಬ್ರೆಜಿಲಿಯಾದ ರಾಬರ್ಟೊ ಕಾರ್ಲೋಸ್ ಅವರಿಗೆ ಬದಲಿಯಾಗಿ ಹೆಡ್ ಕೋಚ್ ಆಗಲಿದ್ದಾರೆ. ಡೈನಾಮೋಸ್‌ಗೆ ಎರಡು ವರ್ಷಗಳ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದು, ಡೈನಾಮೋಸ್ 2015ರಲ್ಲಿ ಐಎಸ್‌ಎಲ್ ಸೆಮಿಫೈನಲ್ ಹಂತವನ್ನು ಪ್ರವೇಶಿಸಿತ್ತು. 
 
 ನಾನು ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತೇನೆ ಮತ್ತು ಭಾರತದ ಸಂಸ್ಕೃತಿಯನ್ನು ಕಲಿಯಲು ಇಚ್ಛಿಸುತ್ತೇನೆ ಎಂದು ಜಾಂಬ್ರೋಟಾ ತಿಳಿಸಿದರು. ಉತ್ತಮ ರಕ್ಷಣಾ ವ್ಯವಸ್ಥೆ ಮತ್ತು ತಂಡದ ಸಮನ್ವಯತೆಗೆ ಕೂಡ ನಾನು ಗಮನಹರಿಸುತ್ತೇನೆ ಎಂದು ಜಾಂಬ್ರೋಟಾ ಹೇಳಿದರು. 
 
 ಆಟಗಾರನಾಗಿ ಜಾಂಬ್ರೋಟಾ ಇಟಲಿ ಪರ 98 ಪಂದ್ಯಗಳನ್ನು ಆಡಿದ್ದು, ಮೂರು ಐರೋಪ್ಯ ಚಾಂಪಿಯನ್‌ಷಿಪ್‌ಗಳು ಮತ್ತು ಮೂರು ವಿಶ್ವಕಪ್‌ಗಳಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಯ್ ಪ್ರಣೀತ್, ಮನು ಆತ್ರಿ-ಸುಮೀತ್ ರೆಡ್ಡಿಗೆ ಬ್ಯಾಡ್ಮಿಂಟನ್ ಪ್ರಶಸ್ತಿಗಳು