Select Your Language

Notifications

webdunia
webdunia
webdunia
webdunia

ಸಾಯ್ ಪ್ರಣೀತ್, ಮನು ಆತ್ರಿ-ಸುಮೀತ್ ರೆಡ್ಡಿಗೆ ಬ್ಯಾಡ್ಮಿಂಟನ್ ಪ್ರಶಸ್ತಿಗಳು

ಸಾಯ್ ಪ್ರಣೀತ್,  ಮನು ಆತ್ರಿ-ಸುಮೀತ್ ರೆಡ್ಡಿಗೆ ಬ್ಯಾಡ್ಮಿಂಟನ್ ಪ್ರಶಸ್ತಿಗಳು
ಕೆನಡಾ , ಮಂಗಳವಾರ, 5 ಜುಲೈ 2016 (18:34 IST)
ಕೆನಡಾ ಓಪನ್‌ನಲ್ಲಿ ಬಿ ಸಾಯ್ ಪ್ರಣೀತ್ ಮತ್ತು ರಿಯೊಗೆ ತೆರಳಲಿರುವ ಡಬಲ್ಸ್ ಜೋಡಿ ಮನು ಆತ್ರಿ ಮತ್ತು ಸುಮೀತ್ ರೆಡ್ಡಿ ಬ್ಯಾಡ್ಮಿಂಟನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.  ನಾಲ್ಕನೇ ಸೀಡ್ 23 ವರ್ಷದ ಪ್ರಣೀತ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ  ಕೊರಿಯಾದ ಲೀ ಹ್ಯುನ್ ಅವರನ್ನು 21-12, 21-10 ಸೆಟ್‌ಗಳಿಂದ ಭಾನುವಾರ ಸೋಲಿಸಿದರು.

ಟಾಪ್ ಸೀಡ್ ಮನು ಮತ್ತು ಸುಮೀತ್ ರೆಡ್ಡಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪುರುಷರ ಮೊದಲ ಡಬಲ್ಸ್ ಜೋಡಿಯಾಗಿದ್ದು ಕಲ್ಗಾರಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಡ್ರಿಯನಾ ಲಿಯು ಮತ್ತು ಟಾಬಿ ಎನ್‌ಜಿಯನ್ನು 21-8, 21-14ರಿಂದ ಸೋಲಿಸಿದರು. 
 
ಗಾಯಗಳು ಮತ್ತು ಫಾರಂ ಕೊರತೆಯಿಂದ ಪೀಡಿತರಾಗಿದ್ದ ಪ್ರಣೀತ್ ಕೆಲವು ವರ್ಷಗಳಿಂದ ಪಂದ್ಯಾವಳಿಗಳಲ್ಲಿ ಆರಂಭದಲ್ಲೇ ಸೋತು ನಿರ್ಗಮಿಸುತ್ತಿದ್ದರು.   2003ರಲ್ಲಿ ಥಾಯ್ಲೆಂಡ್ ಓಪನ್ ಗ್ರಾಂಡ್ ಪ್ರಿಕ್ಸ್ ಟೂರ್ನ್‌ಮೆಂಟ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮಹಮ್ಮದ್ ಹಫೀಜ್ ಹಶೀಮ್‌ರನ್ನು ಸೋಲಿಸಿ ಅಚ್ಚರಿಗೊಳಿಸಿದ್ದರು.

ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಲೀ ಚಾಂಗ್ ವೈಯನ್ನು ಮೊದಲ ಸುತ್ತಿನಲ್ಲೇ ಸೋಲಿಸಿದ್ದರು. ಇಷ್ಟೆಲ್ಲಾ ಶ್ರೇಷ್ಟ ಆಟಗಳ ನಡುವೆಯೂ ಅವರು ಯಾವುದೇ ಪ್ರಶಸ್ತಿ ಗೆದ್ದಿರಲಿಲ್ಲ.  ಆದರೆ ಭಾನುವಾರ ಆಂಧ್ರಪ್ರದೇಶದ ಯುವಕ ತಮ್ಮ ಚೊಚ್ಚಲ ಗ್ರಾಂಡ್ ಪ್ರಿಕ್ಸ್  ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದು ವೇದಿಕೆಗೆ ಏರಿದಾಗ ಎಲ್ಲವೂ ಬದಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಂಬಲ್ಡನ್‌ನಲ್ಲಿ ಸಾನಿಯಾ, ಲಿಯಾಂಡರ್ ಪೇಸ್ ಮುಂದಿನ ಸುತ್ತಿಗೆ