ಫಿಟ್ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ, ಭಾರತದ ಫುಟ್ಬಾಲ್ ಆಟಗಾರರು ಐರೋಪ್ಯದ ಆಟಗಾರರಿಗಿಂತ ಕಡಿಮೆಯಿಲ್ಲ ಎಂದು ಎಫ್‌ಸಿ ಪುಣೆ ಸಿಟಿ ತಂಡದ ದೈಹಿಕ ಚಿಕಿತ್ಸಕ ಮೈಗೇಲ್ ಮಾರ್ಟಿನೆಜ್ ತಿಳಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್ ಫ್ರಾಂಚೈಸಿ ಆಟಗಾರರ ಫಿಟ್ನೆಸ್ ಪರೀಕ್ಷೆಗಳನ್ನು ಕೈಗೊಳ್ಳಲು ಅವರು ನಗರಕ್ಕೆ ಆಗಮಿಸಿದ್ದರು.
ಸ್ಪೇನ್ ದೈಹಿಕ ಚಿಕಿತ್ಸಕ ಭಾರತದ ಫುಟ್ಬಾಲ್ ಸನ್ನಿವೇಶಕ್ಕೆ ಹೊಸಬರಲ್ಲ. ಕಳೆದ ಎರಡು ಸೀಸನ್‌ಗಳಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾಗೆ ಕೆಲಸ ಮಾಡಿ ಮೂರನೇ ಸೀಸನ್‌ನಲ್ಲಿ ಹೆಡ್ ಕೋಚ್ ಆಂಟೊನಿಯೊ ಹಬಾಸ್ ಜತೆ ಪುಣೆಗೆ ನೆಲೆ ಬದಲಿಸಿದ್ದಾರೆ.
ಎಟಿಕೆ ಜತೆ ಎರಡು ಸೀಸನ್‌ಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ, ಸ್ಥಳೀಯ ಆಟಗಾರರು ಫಿಟ್ನೆಸ್ ಮಟ್ಟದಲ್ಲಿ ಐರೋಪ್ಯ ಆಟಗಾರರಿಗಿಂತ ಕಡಿಮೆಯಿಲ್ಲ. ಅವರು ಅಂತಾರಾಷ್ಟ್ರೀಯ ಆಟಗಾರರಿಗೆ ಸಮನಾಗಿದ್ದು, ಮೈದಾನದಲ್ಲಿ ಮಾತ್ರ ತಾಂತ್ರಿಕ ವಿಷಯಗಳಲ್ಲಿ ವ್ಯತ್ಯಾಸ ಹೊಂದಿದ್ದಾರೆ. ತಾಂತ್ರಿಕವಾಗಿ ಅವರು ಶ್ರೇಷ್ಟರಾಗಿದ್ದರೂ ತಾಂತ್ರಿಕ ಅನುಷ್ಠಾನದ ಕೊರತೆಯಿದೆ ಎಂದು ಮಾರ್ಟಿನೆಜ್ ತಿಳಿಸಿದ್ದಾರೆ.
ಭಾರತದ ಫುಟ್ಬಾಲ್ ಅದರ ಗುಣಮಟ್ಟದಲ್ಲಿ ಸುಧಾರಿಸಬೇಕಾದರೆ, ಕೆಳಮಟ್ಟದಿಂದ ಸುದೀರ್ಘ ಕಾಲದ ಅಭಿವೃದ್ಧಿ ಯೋಜನೆಯ ಅಗತ್ಯವಿದೆ ಎಂದರು. ಮುಂದಿನ 2-3 ವರ್ಷಗಳಲ್ಲಿ ಅದಕ್ಕೆ ಪರಿಹಾರ ಸಾಧ್ಯವಿಲ್ಲ. ನಮಗೆ ಹೆಚ್ಚು ಕಾಲಾವಕಾಶ ಬೇಕು. ಸುದೀರ್ಘ ಕಾಲದ ಯೋಜನೆಯ ಪ್ರಾಜೆಕ್ಟ್‌ಗಳು ನಮಗೆ ಅಗತ್ಯವಿದೆ ಎಂದರು.
ತಮ್ಮ ಹೊಸ ತಂಡದ ಆಟಗಾರರಿಂದ ಏನನ್ನು ನಿರೀಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ನಾವು ವೃತ್ತಿಪರ ಆಟಗಾರರಿಂದ ನಿರೀಕ್ಷಿಸಿದ್ದನ್ನೇ ಅವರಿಂದ ನಿರೀಕ್ಷಿಸುತ್ತೇವೆ. ಬದ್ಧತೆ, ಶ್ರಮದ ದುಡಿಮೆ ಮತ್ತು ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮವಾಗಿ ಆಡಿ ಗೆಲ್ಲುವ ಯತ್ನ ಎಂದು ವಿಶ್ಲೇಷಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.