ಭಾರತದ ಬಾಕ್ಸರ್ ಮನೋಜ್ ಕುಮಾರ್ ಲಿತುಯಾನಿಯಾದ ಎವಾಲ್ಡಾಸ್ ಪೆಟ್ರಾಸ್ಕಸ್ ಅವರನ್ನು 32 ಸುತ್ತುಗಳ ಸ್ಪರ್ಧೆಯಲ್ಲಿ ಸೋಲಿಸಿ ಪುರುಷರ ಲೈಟ್ ವೆಲ್ಟರ್‌ವೇಟ್(64 ಕೆಜಿ) ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ಮನೋಜ್ ಎರಡು ಸುತ್ತುಗಳಲ್ಲಿ ಮೇಲುಗೈ ಸಾಧಿಸಿ 29-28, 29-28 ಮತ್ತು 28-29 ಅಂತರದಿಂದ ಎದುರಾಳಿಯನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮನೋಜ್ ಕುಮಾರ್ 16ನೇ ಘಟ್ಟದ ಪಂದ್ಯವನ್ನು ಫಜ್ಲುದ್ದೀನ್ ಗೈಜ್ನಾಜರೋವ್ ವಿರುದ್ಧ ಆಡಲಿದ್ದಾರೆ.