Select Your Language

Notifications

webdunia
webdunia
webdunia
webdunia

ಭಾರತ ಕಬಡ್ಡಿ ವಿಶ್ವಚಾಂಪಿಯನ್

ಭಾರತ ಕಬಡ್ಡಿ ವಿಶ್ವಚಾಂಪಿಯನ್
Ahamdabad , ಶನಿವಾರ, 22 ಅಕ್ಟೋಬರ್ 2016 (21:38 IST)
ಅಹಮದಾಬಾದ್: ಕೊನೆಗೂ ಭಾರತ ಕಬಡ್ಡಿ ತಂಡ ಹೊಸ ದಾಖಲೆ ಬರೆದಿದೆ. ತವರಿನ ಪ್ರೇಕ್ಷಕರ ಎದುರು ವಿಜೃಂಭಿಸಿದ ಅತಿಥೇಯ ತಂಡ ಇರಾನ್ ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಬಾರಿ ವಿಶ್ವ ಚಾಂಪಿಯನ್ ಪಟ್ಟ ಪಡೆದೇ ತೀರುತ್ತೇವೆ ಎಂದಿದ್ದ ನಾಯಕ ಅನೂಪ್ ಕುಮಾರ್ ತಮ್ಮ ಮಾತು ಉಳಿಸಿಕೊಂಡಿದ್ದಾರೆ.  36-28 ಅಂತರದಿಂದ ಗೆಲುವು ಸಾಧಿಸಿದೆ.

ಈ ಬಾರಿ ಆರಂಭದ ಪಂದ್ಯದಲ್ಲಿ ಸೋತಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಅದು ಚಾಂಪಿಯನ್ ಆಟ ಆಡಿತ್ತು. ಆದರೆ ಸಹಜವಾಗಿ ಫೈನಲ್ ಪಂದ್ಯ ಕುತೂಹಲಕಾರಿಯಾಗಿತ್ತು. ಭಾರತಕ್ಕೆ ಸುಲಭವಾಗಿ ಜಯ ದೊರಕಲಿಲ್ಲ. ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ ಅಂತಿಮವಾಗಿ ಭಾರತ ಮೇಲುಗೈ ಸಾಧಿಸಿತು. ಭಾರತದ ಪರ ಅಜಯ್ ಠಾಕೂರ್ ಉತ್ತಮ ಆಟವಾಡಿದರು.

ಇದು ಭಾರತಕ್ಕೆ ಮೂರನೇ ವಿಶ್ವಕಪ್ ಗೆಲುವಾಗಿದ್ದು, ದೇಶದ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಆರ್ ಎಸ್ ಅಳವಡಿಸುವುದು ಒಳ್ಳೆಯದು ಎಂದ ಸೌರವ್ ಗಂಗೂಲಿ