ಒಲಿಂಪಿಕ್ ಗ್ರಾಮಕ್ಕೆ ಪ್ರವೇಶಿಸಿದ ಕೂಡಲೇ ಲಿಯಾಂಡರ್ ಪಯಸ್ ತಮ್ಮ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಜತೆ ಅಭ್ಯಾಸದ ಸೆಷನ್‌ಗೆ ತೆರಳಿದರು. ಅಭ್ಯಾಸಕ್ಕಿಂತ ಹೆಚ್ಚಾಗಿ ಮಾಧ್ಯಮಕ್ಕೆ ಒಂದು ಅಂಶವನ್ನು ಸಾಬೀತು ಮಾಡಲು ಪಯಸ್ ಯತ್ನಿಸಿದ್ದರು. ರಿಯೋದಲ್ಲಿ ಎಲ್ಲಾ ಟೀಂ ಸದಸ್ಯರ ಜತೆ ಇಲ್ಲದೇ ಇದ್ದಿದ್ದಕ್ಕೆ ಪಯಸ್ ಅವರನ್ನು ಟೀಕಿಸಲಾಗಿತ್ತು.
ಯಾವುದು ಹೆಚ್ಚು ಮುಖ್ಯ ಆಡುವುದೋ ಅಥವಾ ಅಭ್ಯಾಸ ಮಾಡುವುದೋ ಎಂದು ಪಯಸ್ ಕೇಳಿದರು. ಅಟ್ಲಾಂಟಾ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಪಯಸ್ ವಾಷಿಂಗ್ಟನ್ ಕ್ಯಾಸಲ್ಸ್‌ಗೆ ವಿಶ್ವ ಟೀಂ ಟೆನ್ನಿಸ್‌ನಲ್ಲಿ ಆಡಲು ತೆರಳಿದ್ದರು.
ನಾನು ಆಡುತ್ತಾ ಗೆಲ್ಲುತ್ತಿದ್ದೆನಾದ್ದರಿಂದ ಇಲ್ಲಿಗೆ ಅಭ್ಯಾಸಕ್ಕೆ ಬರಲಾಗಲಿಲ್ಲ. ಅವರು( ಬೋಪಣ್ಣ ಮತ್ತು ಇತರೆ ಭಾರತೀಯ ಆಟಗಾರರು) ಬೇಗನೇ ಸೋತಿದ್ದರಿಂದ ಇಲ್ಲಿಗೆ ಬೇಗನೇ ಆಗಮಿಸಿದರು. ನಾನು ಕಳೆದ 28 ವರ್ಷಗಳಿಂದ ಭಾರತಕ್ಕೆ ಬೆವರು ಹರಿಸಿದ್ದು ಯಾರಿಗೂ ಅದನ್ನು ಸಾಬೀತು ಮಾಡಬೇಕಿಲ್ಲ ಎಂದು ಪಯಸ್ ಖಾರವಾಗಿ ಹೇಳಿದರು.
ಬೋಪಣ್ಣ ರಿಯೋದಲ್ಲಿ ಕಳೆದ ಒಂದು ವಾರದಿಂದ ತಂಗಿದ್ದು, ಮಿಶ್ರ ಡಬಲ್ಸ್‌ಗಾಗಿ ಸಾನಿಯಾ ಜತೆ ಅಭ್ಯಾಸ ನಡೆಸಿದರು. ಬೋಪಣ್ಣ ಟೊರಂಟೊ ಮಾಸ್ಟರ್ಸ್‌ನಲ್ಲಿ ಜೀನ್- ಜೂಲಿಯನ್ ರೋಜರ್ ಜತೆಯಾಗಿದ್ದು, 16ನೇ ಸುತ್ತಿನಲ್ಲಿ ಸೋತಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ