Webdunia - Bharat's app for daily news and videos

Install App

ಅರ್ಜೆಂಟೈನಾ ಫುಟ್ಬಾಲ್ ಬಿಕ್ಕಟ್ಟು ಪರಿಹಾರಕ್ಕೆ ಮಂತ್ರದಂಡವಿಲ್ಲ: ಮರಡೋನಾ

Webdunia
ಗುರುವಾರ, 16 ಜೂನ್ 2016 (16:32 IST)
ಮಾಜಿ ವಿಶ್ವ ಕಪ್ ವಿಜೇತ ತಂಡದ ಆಟಗಾರ ಮತ್ತು ರಾಷ್ಟ್ರೀಯ ಕೋಚ್ ಡೀಗೊ ಮರಡೋನಾ, ಅರ್ಜೆಂಟೀನಾ ಫುಟ್ಬಾಲ್ ಬಿಕ್ಕನ್ನು ಬಗೆಹರಿಸಲು ತಮ್ಮ ಬಳಿ ಯಾವುದೇ ಮಂತ್ರದಂಡವಿಲ್ಲ ಎಂದು ಹೇಳಿದ್ದಾರೆ. ಆದರೆ ಸ್ಥಗಿತಗೊಂಡ ಮಾತುಕತೆ ಪುನಾರಂಭಕ್ಕೆ ನೆರವಾಗುವುದಾಗಿ ಮರಡೋನಾ ಭರವಸೆ ನೀಡಿದರು.  

ಅರ್ಜೆಂಟೀನಾ ಲೀಗ್ ಭವಿಷ್ಯದ ಕುರಿತು ಸ್ಥಗಿತಗೊಂಡ ಮಾತುಕತೆ ಪುನಾರಂಭಕ್ಕೆ ನೆರವಾಗುವಂತೆ ಫೀಫಾ ಅಧ್ಯಕ್ಷ ಜಿಯಾನಿ ಇನ್‌ಫ್ಯಾಂಟೈನೊ ಮರಡೋನಾಗೆ ಕರೆ ನೀಡಿದ್ದರು.  ಅರ್ಜೆಂಟಿನಾದಲ್ಲಿ ದೊಡ್ಡ ಫುಟ್ಬಾಲ್ ಕ್ಲಬ್‌ಗಳು ಸೂಪರ್ ಲೀಗ್ ರಚಿಸಲು ನಿರ್ಧರಿಸಿರುವುದರಿಂದ ಬಿಕ್ಕಟ್ಟು ಉಂಟಾಗಿದೆ.
 
 ನಾನು ಹೊಸ ಮಾದರಿಯನ್ನು ವಿರೋಧಿಸುವುದಿಲ್ಲ ಎಂದು ಅರ್ಜೆಂಟೈನಾ 1986 ವಿಶ್ವಕಪ್ ಗೆಲುವಿನ ರೂವಾರಿ 55 ವರ್ಷದ ಮರಡೋನಾ ಹೇಳಿದರು. ನನ್ನ ಬಳಿ ಮಂತ್ರದಂಡವಿಲ್ಲ. ನಾವು ಸಾಧಕ, ಬಾಧಕಗಳನ್ನು ಅಳೆಯಬೇಕು. ಅರ್ಜೆಂಟೈನಾ ಫುಟ್ಬಾಲ್ ಪ್ರೀತಿಸುವ ಪ್ರಾಮಾಣಿಕ ಜನರ ಜತೆ ಮಾತನಾಡಬೇಕು ಎಂದು ಮರಡೋನಾ ಹೇಳಿದ್ದಾರೆ. 
 
 ಅರ್ಜೆಂಟೈನಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಜುಲಿಯೊ ಗ್ರೊಂಡಾನಾ 2014ರಲ್ಲಿ ನಿಧನರಾದ ನಂತರ ಆಂತರಿಕ ಅಧಿಕಾರ ಹೋರಾಟವು ಸಂಸ್ಥೆಯಲ್ಲಿ ಉಂಟಾಗಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments