Select Your Language

Notifications

webdunia
webdunia
webdunia
webdunia

ವರದಿಗಾರ್ತಿಗೆ ಲೈವ್`ನಲ್ಲಿ ಎಳೆದಾಡಿ ಲೈಂಗಿಕ ಕಿರುಕುಳ: ಟೆನ್ನಿಸ್ ಆಟಗಾರನಿಗೆ ನಿಷೇಧ

ವರದಿಗಾರ್ತಿಗೆ ಲೈವ್`ನಲ್ಲಿ ಎಳೆದಾಡಿ ಲೈಂಗಿಕ ಕಿರುಕುಳ: ಟೆನ್ನಿಸ್ ಆಟಗಾರನಿಗೆ ನಿಷೇಧ
ಪ್ಯಾರಿಸ್ , ಶನಿವಾರ, 3 ಜೂನ್ 2017 (12:06 IST)
ಯೂರೋ ಸ್ಫೋಟ್ಸ್ ವರದಿಗಾರ್ತಿ ಮಲೈ ಥಾಮಸ್ ಜೊತೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಫ್ರೆಂಚ್ ಟೆನ್ನಿಸ್ ಅಟಗಾರ ಮ್ಯಾಕ್ಸಿಮ್ ಹಮೌನನ್ನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ನಿಷೇಧಿಸಲಾಗಿದೆ.

ಜಾಲಿ ಮೂಡ್`ನಲ್ಲಿ 21 ವರ್ಷದ ಟೆನ್ನಿಸ್ ಆಟಗಾರ ಮ್ಯಾಕ್ಸಿಮ್, ವರದಿಗಾರ್ತಿಯ ಸಂದರ್ಶನಕ್ಕೆ ತಡೆಯೊಡ್ಡಿ ಆಕೆಯ ಭುಜವನ್ನ ಹಿಡಿದೆಳೆದು ಮುತ್ತಿಡಲು ಯತ್ನಿಸುತ್ತಾನೆ. ಪದೇ ಪದೇ ಇದೇ ಪ್ರಯತ್ನ ಮಾಡುತ್ತಾನೆ. ಈ ದೃಶ್ಯ ಲೈವ್ ಪ್ರಸಾರವಾಗಿದೆ. ಟೆನ್ನಿಸ್.  ಆಟಗಾರನ ಈ ಕೃತ್ಯಕ್ಕೆ ಕಾಮೆಂಟೇಟರ್ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ವರದಿಗಾರ್ತಿ, ಅದು ಲೈವ್ ಅಲ್ಲದಿದ್ದರೆ ಒಂದು ಪಂಚ್ ಕೊಟ್ಟು ಕೂರಿಸುತ್ತಿದ್ದೆ ಎಂದಿದ್ದಾಳೆ.

ಯೂರೋ ಸ್ಫೋರ್ಟ್ಸ್ ಮತ್ತು ಟೂರ್ನಿ ಆಡಳಿತ ಮಂಡಳಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ತನಿಖೆ ಬಳಿಕವಷ್ಟೇ ಮ್ಯಾಕ್ಸಿಮ್ ಟೆನ್ನಿಸ್ ಭವಿಷ್ಯ ನಿರ್ಧಾರವಾಗಲಿದೆ. ಟೀಕೆಗಳ ಬಳಿಕ ತನ್ನ ಕೃತ್ಯದ ಬಗ್ಗೆ ವಿಷಾಧ ವ್ಯಕ್ತಪಡಿಸಿರುವ ಟೆನ್ನಿಸ್ ಆಟಗಾರ ಮ್ಯಾಕ್ಸಿಮ್, ವರದಿಗಾರ್ತಿಯ ಕ್ಷಮೆ ಯಾಚಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಚಿನ್ ತೆಂಡುಲ್ಕರ್!!