Select Your Language

Notifications

webdunia
webdunia
webdunia
webdunia

ಹಾಕಿ ತಂಡದ ಕೋಚ್ ಈಗ ಬೀದಿಬದಿ ವ್ಯಾಪಾರಿ

ಹಾಕಿ ತಂಡದ ಕೋಚ್ ಈಗ ಬೀದಿಬದಿ ವ್ಯಾಪಾರಿ
ಗೋರಕ್ಪುರ , ಮಂಗಳವಾರ, 6 ಸೆಪ್ಟಂಬರ್ 2016 (17:48 IST)
ನಮ್ಮ ದೇಶದಲ್ಲಿ ಕ್ರಿಕೆಟ್ ಹೊರತು ಪಡಿಸಿ ಉಳಿದ ಕ್ರೀಡೆಗಳಿಗೆ ಎಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದಕ್ಕೆ ರಿಯೋ ಓಲಂಪಿಕ್ಸ್‌ನಲ್ಲಿ ಗಳಿಸಿದ ಪದಕಗಳೇ ಉತ್ತಮ ಸಾಕ್ಷಿ. ಕ್ರಿಕೆಟ್ ರಂಗದ ಕ್ರೀಡಾಪಟುಗಳು ಶ್ರೀಮಂತಿಕೆಯ ಜೀವನವನ್ನು ನಡೆಸುತ್ತಿದ್ದಾರೆ. ಉಳಿದ ಕ್ರೀಡೆಗಳ ಸ್ಟಾರ್‌ಗಳು ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಮ್ಮಲ್ಲಿದೆ. ಅದಕ್ಕೊಂದು ಉತ್ತಮ ಉದಾಹರಣೆ ದೇಶದ ಮಾಜಿ ಹಾಕಿ ಕೋಚ್ ಒಬ್ಬರ ಇಂದಿನ ಸ್ಥಿತಿ. 

ದೇಶಕ್ಕೆ ಐವರು ಅಂತರಾಷ್ಟ್ರೀಯ ಹಾಕಿ ಪಟು ಮತ್ತು 50 ರಾಷ್ಟ್ರ ಮಟ್ಟದ ಆಟಗಾರರನ್ನು ನೀಡಿದ ಮಾಜಿ ಹಾಕಿ ಕೋಚ್ ಮೊಹಮ್ಮದ್ ಇಮ್ರಾನ್ ಜೀವನ ನಿರ್ವಹಣೆಗಾಗಿ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿದ್ದಾರೆ.  ಉತ್ತರ ಪ್ರದೇಶದ ಗೋರಕ್ಪುರದಲ್ಲಿ ಟ್ರ್ಯಾಕ್ ಸೂಟ್ಸ್ ಮತ್ತು ಟಿ-ಶರ್ಟ್‌ಗಳನ್ನು ಮಾರಿ ಬದುಕುತ್ತಿದ್ದಾರೆ ಅವರು.
 
ಫರ್ಟಿಲೈಜೇಷನ್ ಕಾರ್ಪೋರೇಷನ್ ಆಫ್ ಇಂಡಿಯಾ ಪರ ಆಡುತ್ತಿದ್ದ ಅವರು ಸರ್ಕಾರ ಈ ಸಂಸ್ಥೆಯನ್ನು ಮುಚ್ಚಿದ ಬಳಿಕ ಒಂದೊಪ್ಪತ್ತಿನ ಊಟಕ್ಕೆ ಕಷ್ಟ ಪಟ್ಟು ವ್ಯಾಪಾರಕ್ಕೆ ಇಳಿಯುವಂತಾಯಿತು. ಇಮ್ರಾನ್ ಅವರಿಗೆ ಕೇವಲ 1,000 ರೂಪಾಯಿ ನಿವೃತ್ತಿ ವೇತನ ದೊರೆಯುತ್ತದೆ. 
 
ಅವರ ಗರಡಿಯಲ್ಲಿ ಪಳಗಿದ ರಿಟಾ ಪಾಂಡೆ, ರಜ್ನಿ ಚೌಧರಿ, ಸಂಜೀವ್ ಓಜಾ, ಪ್ರತಿಮಾ ಚೌಧರಿ, ಜನಾರ್ದನ್ ಗುಪ್ತಾ, ಸನ್ವರ್ ಅಲಿ ಅಂತರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಯುಎಸ್ ಓಪನ್: ಸಾನಿಯಾಗೆ ಮುನ್ನಡೆ, ಮಿಶ್ರ ಡಬಲ್ಸ್‌ನಿಂದ ಬೋಪಣ್ಣ ನಿರ್ಗಮನ