Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್ 2022: ಭಾರತಕ್ಕೆ ಪದಕ ಗೆಲ್ಲುವ ಫೇವರಿಟ್ ತಾರೆಯರು ಯಾರು?

ಕಾಮನ್ ವೆಲ್ತ್ ಗೇಮ್ಸ್ 2022: ಭಾರತಕ್ಕೆ ಪದಕ ಗೆಲ್ಲುವ ಫೇವರಿಟ್ ತಾರೆಯರು ಯಾರು?
ನವದೆಹಲಿ , ಗುರುವಾರ, 28 ಜುಲೈ 2022 (09:00 IST)
ನವದೆಹಲಿ: ಇಂದಿನಿಂದ ಆರಂಭವಾಗುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ತಾರೆಯರು ಪದಕ ನಿರೀಕ್ಷೆ ಹೊತ್ತು ಮೈದಾನಕ್ಕಿಳಿಯಲಿದ್ದಾರೆ. ಭಾರತಕ್ಕೆ ಪದಕ ಗೆದ್ದು ತರಬಲ್ಲ ಫೇವರಿಟ್ ಗಳು ಯಾರು ಎಂದು ನೋಡೋಣ.

ಅಥ್ಲಿಟಿಕ್ ವಿಭಾಗದಲ್ಲಿ ಹಿಮಾ ದಾಸ್, ಮನ್ ಪ್ರೀತ್ ಕೌರ್, ನಿತೇಂದರ್ ರಾವತ್ ಮೇಲೆ ನಿರೀಕ್ಷೆಯಿದೆ. ಬ್ಯಾಡ್ಮಿಂಟನ್ ವಿಭಾಗದಲ್ಲಿ ಎಂದಿನಂತೆ ಪಿ.ವಿ. ಸಿಂಧು ಭಾರತದ ಭರವಸೆ. ಅವರ ಜೊತೆಗೆ ಕಿಡಂಬಿ ಶ್ರೀಕಾಂತ್ ಮೇಲೂ ಅಷ್ಟೇ ನಿರೀಕ್ಷೆಯಿದೆ. ಅಲ್ಲದೆ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಸ್ಪರ್ಧೆಯಲ್ಲಿದ್ದಾರೆ.

ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಪದಕ ಗೆದ್ದು ತರಬಲ್ಲ ಅನೇಕ ತಾರೆಯರಿದ್ದಾರೆ. ಅಮಿತ್ ಪಂಗಲ್, ಆಶಿಶ್ ಕುಮಾರ್ ಚೌಧರಿ, ಲೊವ್ಲಿನಾ ಮೇಲೆ ಭರವಸೆಯಿದೆ. 1998 ರ ಬಳಿಕ ಮೊದಲ ಬಾರಿಗೆ ಕ್ರಿಕೆಟ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸೇರ್ಪಡೆಯಾಗಿದೆ. ಟಿ20 ಫಾರ್ಮ್ಯಾಟ್ ನಲ್ಲಿ ಪಂದ್ಯ ನಡೆಯಲಿದ್ದು, ಹರ್ಮನ್ ಪ್ರೀತ್ ಕೌರ್ ಪಡೆ ಕನಿಷ್ಠ ಕಂಚಿನ ಪದಕವಾದರೂ ಗೆದ್ದಾರೆಂಬ ವಿಶ್ವಾಸವಿದೆ.

ಇನ್ನು ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಪುರುಷರ ಹಾಕಿ ಮತ್ತು ಸ್ಪೂರ್ತಿದಾಯಕ ಪ್ರದರ್ಶನ ನೀಡಿದ್ದ ಮಹಿಳೆಯರ ಹಾಕಿ ತಂಡದ ಮೇಲೂ ಪದಕದ ಭರವಸೆಯಿಡಲಾಗಿದೆ. ವೈಟ್ ಲಿಫ್ಟಿಂಗ್ ಭಾರತಕ್ಕೆ ಪದಕ ಗೆದ್ದು ಕೊಡಬಲ್ಲ ಮತ್ತೊಂದು ವಿಭಾಗ. ಈ ವಿಭಾಗದಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾ ಬಾಯಿ ಚಾನು ಸ್ಪರ್ಧಿಸುತ್ತಿದ್ದಾರೆ. ಕುಸ್ತಿಯಲ್ಲಿ ವಿನೇಶ್ ಪೋಗಟ್, ಅಂಶು ಮಲಿಕ್, ಸಾಕ್ಷಿ ಮಲಿಕ್, ರವಿಕುಮಾರ್ ದಹಿಯಾ, ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಭಾರತದ ಭರವಸೆಯ ತಾರೆಯರು.

ಭಾರತವನ್ನು ಪ್ರತಿನಿಧಿಸುವ ಎಲ್ಲಾ ತಾರೆಯರು ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಲು ಎಂಬುದು ನಮ್ಮ ಹಾರೈಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಗೆ ಇಂದು ಬರ್ಮಿಂಗ್ ಹ್ಯಾಮ್ ನಲ್ಲಿ ಚಾಲನೆ: ಭಾರತೀಯರ ಮೇಲೆ ಭಾರೀ ನಿರೀಕ್ಷೆ