Select Your Language

Notifications

webdunia
webdunia
webdunia
webdunia

ಪ್ರಬಲರಾಗಿ ಕಮ್‌ಬ್ಯಾಕ್ ಆಗುವುದಾಗಿ ರೊನಾಲ್ಡೊ ಶಪಥ

ಪ್ರಬಲರಾಗಿ ಕಮ್‌ಬ್ಯಾಕ್ ಆಗುವುದಾಗಿ ರೊನಾಲ್ಡೊ ಶಪಥ
ಮ್ಯಾಡ್ರಿಡ್: , ಮಂಗಳವಾರ, 19 ಜುಲೈ 2016 (16:56 IST)
ಫ್ರಾನ್ಸ್ ವಿರುದ್ಧ ಯೂರೊ 2016ರ ಫೈನಲ್‌ ಪಂದ್ಯದಲ್ಲಿ ಗಾಯಗೊಂಡಿದ್ದ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮುಂಬರುವ ಸೀಸನ್‌ನಲ್ಲಿ ಮತ್ತೆ ಪ್ರಬಲರಾಗಿ ಕಮ್‌ಬ್ಯಾಕ್ ಆಗುವುದಾಗಿ ತಿಳಿಸಿದ್ದಾರೆ. ತಮ್ಮ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಫೈನಲ್ ಮೊದಲಾರ್ಧದಲ್ಲಿ ಮಂಡಿ ಗಾಯದಿಂದ ಕಣ್ಣೀರುಹರಿಸುತ್ತಾ ಹೊರಬಂದಿದ್ದರು.

ಅವರ ಎಡ ಮಂಡಿಯಲ್ಲಿ ಅಸ್ತಿರಜ್ಜು ಗಾಯದಿಂದ ರಿಯಲ್ ಮ್ಯಾಡ್ರಿಡ್ ಸ್ಥಳೀಯ ಲಾ ಲಿಗಾ ಸೀಸನ್‌ನ ಮೂರನೇ ಕ್ರೀಡಾಕೂಟಕ್ಕೆ ಮುಂಚೆ ಅವರು ಆಡುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.
 
  ಮೂರು ಬಾರಿ ಚಿನ್ನದ ಚೆಂಡು ಪ್ರಶಸ್ತಿ ವಿಜೇತರಾಗಿದ್ದ ರೊನಾಲ್ಡೊ ಆರಂಭಿಕ ಗಾಯದ ಬಳಿಕ 25ನೇ ನಿಮಿಷದಲ್ಲಿ ಮೈದಾನದಿಂದ ನಿರ್ಗಮಿಸಿ ಅವರಿಗೆ ಬದಲಿ ಆಟಗಾರನನ್ನು ತರಲಾಯಿತು. ಹೆಚ್ಚುವರಿ ಸಮಯದಲ್ಲಿ ಎಡರ್ ಗೋಲು ಹೊಡೆದು ಪೋರ್ಚುಗಲ್‌ಗೆ ವಿಜಯ ತಂದಿತ್ತರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್: ರಷ್ಯಾ ಸ್ಥಿತಿ ಡೋಲಾಯಮಾನ, ನಿಷೇಧಕ್ಕೆ ಐಒಸಿ ಪರಿಶೀಲನೆ