Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ: ಫೈನಲ್‌ನಲ್ಲಿ ಸೋತ ಭಾರತಕ್ಕೆ ಬೆಳ್ಳಿ ಪದಕ

champions trophy
ಲಂಡನ್: , ಶನಿವಾರ, 18 ಜೂನ್ 2016 (11:12 IST)
ಭಾರತ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಪೆನಾಲ್ಟಿ ಶೂಟ್‍ಔಟ್‌ನಲ್ಲಿ 1-3ರಿಂದ ಸೋಲಪ್ಪುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದೆ. ಶೂಟ್‌ಔಟ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮಾತ್ರ ಸ್ಕೋರ್ ಮಾಡಲು ಸಾಧ್ಯವಾಯಿತು. ಉತ್ತಪ್ಪಾ, ಸುನಿಲ್ ಮತ್ತು ಸುರೇಂದರ್ ಕುಮಾರ್ ಎಲ್ಲರೂ ಶೂಟ್‌ಔಟ್‌ನಲ್ಲಿ ಗುರಿತಪ್ಪಿದರು. ಎರಡೂ ತಂಡಗಳಿಗೆ ತಲಾ ನಾಲ್ಕು ಶೂಟ್‌ಔಟ್ ಅವಕಾಶಗಳನ್ನು ನೀಡಲಾಗುತ್ತದೆ.

ಆಸ್ಟ್ರೇಲಿಯಾ 3-1ರಿಂದ ಮುನ್ನಡೆ ಸಾಧಿಸಿ ಜಯಗಳಿಸಿತು. ಆಸ್ಟ್ರೇಲಿಯಾ ಪರ ಅರಾನ್ ಜೆಲೆವ್‌ಸ್ಕಿ, ಡಾನಿಯಲ್ ಬೀಲೆ ಮತ್ತು ಸೈಮನ್ ಆರ್ಚರ್ಡ್ ಸ್ಕೋರ್ ಮಾಡಿದರು. ಟ್ರೆಂಟ್ ಮಿಟ್ಟನ್ ಪ್ರಯತ್ನವನ್ನು ಮಾತ್ರ ಶ್ರೀಜೇಶ್ ತಡೆದರು. ಶೂಟ್‌ಔಟ್‌ನಲ್ಲಿ ನಾಟಕೀಯ ವಿದ್ಯಮಾನವೂ ನಡೆಯಿತು. ಬೀಲೆ ಶಾಟ್‌ನಲ್ಲಿ ಸ್ಕೋರ್ ಮಾಡಲು ವಿಫಲರಾದ ನಂತರ ವಿಡಿಯೊ ರಿವ್ಯೂ ಕೇಳಿದ ಬಳಿಕ ಅವರಿಗೆ ಪುನಃ ಅವಕಾಶ ನೀಡಲಾಯಿತು.

ಪುನಃ ಶಾಟ್ ಹೊಡೆಯುವಂತೆ ವಿಡಿಯೊ ಅಂಪೈರ್ ಸೂಚಿಸಿದ್ದರಿಂದ ಭಾರತದ ಕೋಚ್ ರೊಯಿಲೆಂಟ್ ಓಲ್ಟ್‌ಮ್ಯಾನ್ಸ್ ಕಂಗಾಲಾದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹಣಾಹಣಿ ಹೋರಾಟದಲ್ಲಿ ಯಾವ ತಂಡವೂ ಗೋಲು ಗಳಿಸದೇ ಇದ್ದಿದ್ದರಿಂದ ಪೆನಾಲ್ಟಿ ಶೂಟ್‌ಔಟ್‌ಗೆ ಆದೇಶಿಸಲಾಗಿತ್ತು. 
 
ಪಂದ್ಯದ ಕೊನೆಯಲ್ಲಿ ಭಾರತ ಬೀಲೆಗೆ ನೀಡಿರುವ ಎರಡನೇ ಶೂಟ್ಔಟ್ ಅವಕಾಶವನ್ನು ಪ್ರತಿಭಟಿಸಿದ್ದರಿಂದ ಪಂದ್ಯದ ಫಲಿತಾಂಶದ ಅಂತಿಮ ಪ್ರಕಟಣೆ ವಿಳಂಬವಾಯಿತು.
 
ಸುಮಾರು ಒಂದು ಗಂಟೆಯವರೆಗೆ ಅಪೀಲನ್ನು ಚರ್ಚಿಸಿದ ಬಳಿಕ ಪುನಃ ಪೆನಾಲ್ಟಿ ಶೂಟ್‌ಔಟ್‌ಗೆ ಅವಕಾಶ ನೀಡಿದ್ದನ್ನು ತೀರ್ಪುಗಾರರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬೆಳವಣಿಗೆಯಿಂದ ಮಾರುಹೋದ ದಿನೇಶ್ ಕಾರ್ತಿಕ್