Select Your Language

Notifications

webdunia
webdunia
webdunia
webdunia

ಬ್ಯಾಡ್ಮಿಂಟನ್ ಲೀಗ್ ನ ಮೊದಲ ಪಂದ್ಯದಲ್ಲೇ ಪಿವಿ ಸಿಂಧುಗೆ ತಿರುಗೇಟು ಕೊಟ್ಟ ಕೆರೊಲಿನಾ ಮಾರಿನ್

ಬ್ಯಾಡ್ಮಿಂಟನ್ ಲೀಗ್ ನ ಮೊದಲ ಪಂದ್ಯದಲ್ಲೇ ಪಿವಿ ಸಿಂಧುಗೆ ತಿರುಗೇಟು ಕೊಟ್ಟ ಕೆರೊಲಿನಾ ಮಾರಿನ್
NewDelhi , ಸೋಮವಾರ, 2 ಜನವರಿ 2017 (09:00 IST)
ನವದೆಹಲಿ: ಇತ್ತೀಚೆಗಷ್ಟೇ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು, ವಿಶ್ವ ಚಾಂಪಿಯನ್ ಕೆರೊಲಿನಾ ಮಾರಿನ್ ಸೋಲಿಸಿ ಹಾಂಗ್ ಕಾಂಗ್ ಓಪನ್ ಗೆದ್ದಿದ್ದರು. ಇದೀಗ ಆ ಸೋಲಿಗೆ ಮಾರಿನ್ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ತಿರುಗೇಟು ಕೊಟ್ಟಿದ್ದಾರೆ.


ಮೊದಲ ಪಂದ್ಯದಲ್ಲೇ ಸಿಂಧುವನ್ನು 11-8,  12-14, 11-2 ಅಂತರದಿಂದ ಮಾರಿನ್ ಸೋಲುಣಿಸಿದ್ದಾರೆ. ಇದೇ ಮಾರಿನ್ ವಿರುದ್ಧ ಸಿಂಧು ರಿಯೋ ಒಲಿಂಪಿಕ್ಸ್ ಫೈನಲ್ ನಲ್ಲಿ ಸೋತಿದ್ದರು. ಮಾರಿನ್ ಹೈದರಾಬಾದ್ ತಂಡದ ಪರ ಮತ್ತು ಸಿಂಧು ಚೆನ್ನೈ ತಂಡದ ಪರ ಆಡುತ್ತಿದ್ದಾರೆ.

ಸ್ಪೇನ್ ನ ತಾರೆ ಯಾವುದೇ ಹಂತದಲ್ಲೂ ಸಿಂಧುಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಎರಡನೇ ಸೆಟ್ ನಲ್ಲಿ ಸಿಂಧು ಗೆದ್ದರಾದರೂ, ಅಂತರ ಕೇವಲ 2 ಅಂಕಗಳಿತ್ತಷ್ಟೇ. ಇದರೊಂದಿಗೆ ಹೈದರಾಬಾದ್ ತಂಡ ಪ್ರೀಮಿಯರ್ ಲೀಗ್ ನಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಿನ್ನರ್ ಅನಿಲ್ ಕುಂಬ್ಳೆ ಗುರುವಾಗಿ ಹೇಗಿರ್ತಾರೆ ಗೊತ್ತಾ?