ವಿದ್ಯಾರ್ಥಿ ಭವನದ ಸ್ಪೆಶಲ್ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ

Sampriya
ಶುಕ್ರವಾರ, 30 ಆಗಸ್ಟ್ 2024 (18:04 IST)
Photo Courtesy X
ಬೆಂಗಳೂರು: ನಗರದ ಬಸವನಗುಡಿ ಗಾಂಧಿ ಬಜಾರ್‌ನಲ್ಲಿರುವ ಸಸ್ಯಹಾರಿ ಟಿಫಿನ್ ರೆಸ್ಟೋರೆಂಟ್ ವಿದ್ಯಾರ್ಥಿ ಭವನ ಹಲವು ಸೆಲೆಬ್ರಿಟಿಗಳ ಫೆವರೆಟ್ ಸ್ಥಳವಾಗಿದೆ. 1943ರಲ್ಲಿ ಪ್ರಾರಂಭವಾದ ವಿದ್ಯಾರ್ಥಿ ಭವನ ಹೋಟೆಲ್ ದಶಕಗಳಿಂದ ಪ್ರಸಿದ್ಧಿಯನ್ನು ಹಾಗೇ ಉಳಿಸಿಕೊಂಡು, ಅದೇ ರುಚಿಯ ತಿನಿಸುಗಳನ್ನು ಬಡಿಸುತ್ತಾ ಬಂದಿದೆ.

ವಿಶಿಷ್ಟ ರುಚಿಯ ಮಸಾಲೆ ದೋಸೆಗೆ ಖ್ಯಾತವಾದ ಈ ಹೊಟೇಲ್‌ ಸಾಹಿತ್ಯ, ಸಾಂಸ್ಕೃತಿಕ ಲೋಕದೊಂದಿಗೂ ವಿಶಿಷ್ಟ ನಂಟು ಹೊಂದಿದೆ. ಆಗಾಗ ಈ ಹೊಟೇಲ್‌ಗಳಿಗೆ ಸೆಲೆಬ್ರಿಟಿಗಳು, ಕ್ರೀಡಾ ಲೋಕದ ದಿಗ್ಗಜರು, ಸಾಹಿತಿಗಳು ಭೇಟಿ ನೀಡಿ, ಇಲ್ಲಿನ ಫೇಮಸ್ ಮಸಾಲೆ ದೋಸೆಯನ್ನು ಸವಿಯುತ್ತಾರೆ.

ಇದೀಗ ವಿದ್ಯಾರ್ಥಿ ಭವನದ ದೋಸೆ ರುಚಿಗೆ ಮಾರುಹೋಗಿರುವ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್‌ಗೆ ಮೆಂಟರ್ ಆಗಿದ್ದ ಪ್ರಕಾಶ್ ಪಡುಕೋಣೆ ಅವರು ಪತ್ನಿ ಸಮೇತ ಹೊಟೇಲ್‌ಗೆ ಭೇಟಿ ನೀಡಿದ್ದಾರೆ.

ಗುರುವಾರ ಸಂಜೆ ವೇಳೆ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟ ಪ್ರಕಾಶ್ ಪಡುಕೋಣೆ ಹಾಗೂ ಉಜ್ವಾಲಾ ಪಡುಕೋಣೆ ದಂಪತಿ ಅವರು ಫೇಮಸ್ ಮಸಾಲೆ ದೋಸೆಯನ್ನು ಸವಿದರು. ನಂತರ ಹೊಟೇಲ್ ಸಿಬ್ಬಂದಿ ಜತೆ ಫೋಟೋ ತೆಗೆಸಿಕೊಂಡರು. ಭೇಟಿಯ ಫೋಟೋಗಳನ್ನು ವಿದ್ಯಾರ್ಥಿ ಭವನದ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

Womens World Cup: ಭಾರತದ ವನಿತೆಯರಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

ಮುಂದಿನ ಸುದ್ದಿ
Show comments