Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಪದಕ ವಿಜೇತನ ಜತೆ ಕುಸ್ತಿ ಆಡಿ ಗೆದ್ದ ಬಾಬಾ ರಾಮ್ ದೇವ್!

ಒಲಿಂಪಿಕ್ಸ್ ಪದಕ ವಿಜೇತನ ಜತೆ ಕುಸ್ತಿ ಆಡಿ ಗೆದ್ದ ಬಾಬಾ ರಾಮ್ ದೇವ್!
NewDelhi , ಗುರುವಾರ, 19 ಜನವರಿ 2017 (08:57 IST)
ನವದೆಹಲಿ: ಪತಂಜಲಿ ಪ್ರಾಡಕ್ಟ್ ಗಳ ನಿರ್ಮಾತೃ ಯೋಗ ಗುರು ಬಾಬಾ ರಾಮ್ ದೇವ್ ಅಂದ್ರೆ ಸುಮ್ನೇನಾ? ಎಲ್ಲಾ ಆಯ್ತು. ಇದೀಗ ಕುಸ್ತಿ ಅಖಾಡಕ್ಕೆ ಧುಮುಕಿರುವ ಯೋಗ ಗುರು ಒಲಿಂಪಿಕ್ಸ್ ಪದಕ ವಿಜೇತ ಆಟಗಾರನನ್ನೇ ಮಣಿಸಿದ್ದಾರೆ.


2008 ರ ಒಲಿಂಪಿಕ್ಸ್ ನಲ್ಲಿ ಭಾರತೀಯ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಮಣ್ಣು ಮುಕ್ಕಿಸಿದ ರಷ್ಯಾದ ಆಂಡ್ರೆ ಸ್ಟ್ಯಾಡ್ನಿಕ್ ರನ್ನು ಸೋಲಿಸಿದ್ದಾರೆ. ಇದೆಲ್ಲಾ ನಡೆದದ್ದು ಪ್ರೊ ಕುಸ್ತಿ ಲೀಗ್ ನ 2 ನೇ ಸೆಮಿಫೈನಲ್ ವೇಳೆ ನಡೆದ ಸೌಹಾರ್ದ ಪಂದ್ಯದಲ್ಲಿ.

ಒಲಿಂಪಿಕ್ಸ್ ಪದಕ ವಿಜೇತನನ್ನು 12-0 ಅಂತರದಲ್ಲಿ ಸೋಲಿಸಿದ ರಾಮ್ ದೇವ್ ತಮ್ಮ ಯೋಗದ ಶಕ್ತಿ ಎಷ್ಟಿದೆ ನೋಡಿ ಎಂದು ಹೇಳಿಕೊಂಡರು. ಇದರ ಜತೆಗೆ ರಷ್ಯಾದ ಆಟಗಾರನಿಗೆ  ತಮ್ಮ ಯೋಗದ ಕೆಲವು ವಿಶಿಷ್ಟ ಆಸನಗಳನ್ನು ಮಾಡಿ ತೋರಿಸಿ ತಮ್ಮ ಪ್ರತಿಭಾ ಪ್ರದರ್ಶನವನ್ನೂ ಮಾಡಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯಕ್ಕೆ ಬಾರಾಬತಿ ಸಜ್ಜು