Webdunia - Bharat's app for daily news and videos

Install App

ಮೆಸ್ಸಿ ಅರ್ಜೈಂಟೀನಾದ ಸರ್ವಕಾಲಿಕ ಟಾಪ್ ಗೋಲ್ ಸ್ಕೋರರ್

Webdunia
ಬುಧವಾರ, 22 ಜೂನ್ 2016 (14:01 IST)
ಹೌಸ್ಟನ್:  ಅರ್ಜೈಂಟೀನಾ ಸ್ಟ್ರೈಕರ್ ಲಯನಲ್ ಮೆಸ್ಸಿ ಮಂಗಳವಾರ ತಮ್ಮ ರಾಷ್ಟ್ರದ ಸರ್ವಕಾಲಿಕ ಗೋಲ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಕೊಪಾ ಅಮೆರಿಕ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ವಿರುದ್ಧ ಮೆಸ್ಸಿ ಸ್ಕೋರ್ ಮಾಡಿದಾಗ ಅವರ ಅಂತಾರಾಷ್ಟ್ರೀಯ ಟ್ಯಾಲಿಯನ್ನು 55 ಗೋಲುಗಳಿಗೆ ಒಯ್ದಿದ್ದಾರೆ. ಐದು ಬಾರಿ ವರ್ಷದ ವಿಶ್ವ ಶ್ರೇಷ್ಟ ಆಟಗಾರ ಪ್ರಶಸ್ತಿಗೆ ಪಾತ್ರರಾಗಿರುವ  ಮೆಸ್ಸಿ ಹೌಸ್ಟನ್‌ನಲ್ಲಿ 32ನೇ ನಿಮಿಷದಲ್ಲಿ ಗೋಲು ಹೊಡೆದು ಅರ್ಜೈಂಟೀನಾಗೆ 2-0 ಮುನ್ನಡೆ ಒದಗಿಸಿದರು.

 
112ನೇ ಅಂತಾರಾಷ್ಟ್ರೀಯ ಪಂದ್ಯದ ಅವರ ಗೋಲಿನಿಂದ ಎರಡು ಬಾರಿಯ ವಿಶ್ವ ಚಾಂಪಿಯನ್ನರಾದ ಅರ್ಜೈಂಟೀನಾ ಪರ 78 ಪಂದ್ಯಗಳಲ್ಲಿ 54 ಗೋಲುಗಳನ್ನು ಗಳಿಸಿದ ಗೇಬ್ರಿಯಲ್ ಬ್ಯಾಟಿಸ್ಟುಟಾಗಿಂತ ಮೇಲುಗೈ ಸಾಧಿಸಿದ್ದಾರೆ. 
 
 ಮೆಸ್ಸಿ ಗೋಲು 25 ಯಾರ್ಡುಗಳ ದೂರದಿಂದ ಫ್ರೀ ಕಿಕ್ ಮೂಲಕ ಗಳಿಸಿದ್ದಾಗಿದ್ದು, ಅಮೆರಿಕದ ಗೋಲುರಕ್ಷಕನಿಗೆ ಅದನ್ನು ತಡೆಯುವ ಅವಕಾಶ ಕಡಿಮೆಯಾಗಿತ್ತು. ಇದಾದ ಬಳಿಕ ಎಜೆಕ್ವಿಲ್ ಲಾವೇಜಿ ಮೂರು ನಿಮಿಷಗಳಲ್ಲಿ ಮತ್ತೊಂದು ಗೋಲು ಗಳಿಸಿದರು. ಬಾರ್ಸೆಲೋನಾ ಸ್ಟ್ರೈಕರ್ ಈಗ ಕೊಪಾ ಅಮೆರಿಕಾದಲ್ಲಿ 5 ಗೋಲುಗಳನ್ನು ಗಳಿಸಿದ್ದಾರೆ. ಪಂದ್ಯಾವಳಿಯ ಟಾಪ್ ಗೋಲ್ ಸ್ಕೋರರ್ ಆಗಲು ಚಿಲಿಯ ಎಡ್ವರ್ಡೊ ವರ್ಗಾಸ್ ಅವರಿಗಿಂತ ಒಂದು ಗೋಲು ಹಿಂದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments