Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಪಿ.ವಿ. ಸಿಂಧು ಮ್ಯಾಜಿಕ್ ಸೈನಾ ನೆಹ್ವಾಲ್ ಗೆ ನಿರಾಸೆ

ಮತ್ತೊಮ್ಮೆ ಪಿ.ವಿ. ಸಿಂಧು ಮ್ಯಾಜಿಕ್ ಸೈನಾ ನೆಹ್ವಾಲ್ ಗೆ ನಿರಾಸೆ
NewDelhi , ಬುಧವಾರ, 30 ನವೆಂಬರ್ 2016 (09:44 IST)
ನವದೆಹಲಿ: ಚೀನಾ ಓಪನ್ ವಿಜೇತೆ ಪಿ.ವಿ. ಸಿಂಧುಗೆ ಇದು ಸುಗ್ಗಿ ಕಾಲ. ಆದರೆ ಸೈನಾ ನೆಹ್ವಾಲ್ ಗೆ ಯಾಕೋ ಗ್ರಹಣ ಬಿಡುವಂತೆ ಕಾಣುತ್ತಿಲ್ಲ. ಪ್ರತಿಷ್ಠಿತ ವಿಶ್ವ ಸೂಪರ್ ಸೀರೀಸ್ ನ ಫೈನಲ್ ಗೆ ಸಿಂಧು ಅರ್ಹತೆ ಗಿಟ್ಟಿಸಿಕೊಂಡಿದ್ದರೆ ಇನ್ನೊಬ್ಬ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

ಡಿಸೆಂಬರ್ 14 ರಿಂದ 18 ರವರೆಗೆ ದುಬೈನಲ್ಲಿ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದೆ. ಈ ಕೂಟದಲ್ಲಿ 8 ಸಿಂಗಲ್ಸ್ ಜೋಡಿಗೆ ಮಾತ್ರ ಅವಕಾಶ. ಅವರಲ್ಲಿ ಸಿಂಧು ಕೂಡಾ ಒಬ್ಬರು ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ. ಕಳೆದ ಹಾಂಗ್ ಕಾಂಗ್ ಓಪನ್ ಸೀರೀಸ್ ನಲ್ಲಿ ರನ್ನರ್ ಅಪ್ ಪ್ರಶಸ್ತಿ ಸಾಧನೆಯ ಆಧಾರದಲ್ಲಿ ಸಿಂಧುಗೆ ಈ ಅವಕಾಶ ಸಿಕ್ಕಿದೆ.

ಕಳೆದ ಎರಡು ಸೂಪರ್ ಸೀರೀಸ್ ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾದ ಹಿನ್ನಲೆಯಲ್ಲಿ ಸೈನಾ ಅರ್ಹತೆ ಕಳೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ  ಸೈನಾ ನೆಹ್ವಾಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಮತ್ತು ಇಂಗ್ಲೆಂಡ್ ಆಟಗಾರರಿಗೆ ಮಿನಿ ಬ್ರೇಕ್