Select Your Language

Notifications

webdunia
webdunia
webdunia
webdunia

ಭಾರತ ಮತ್ತು ಇಂಗ್ಲೆಂಡ್ ಆಟಗಾರರಿಗೆ ಮಿನಿ ಬ್ರೇಕ್

ಭಾರತ ಮತ್ತು ಇಂಗ್ಲೆಂಡ್ ಆಟಗಾರರಿಗೆ ಮಿನಿ ಬ್ರೇಕ್
Chandigarh , ಬುಧವಾರ, 30 ನವೆಂಬರ್ 2016 (08:47 IST)
ಮೊಹಾಲಿ: ಮೂರು ಟೆಸ್ಟ್ ಮುಗಿದೇ ಹೋಯ್ತು. ಇನ್ನುಳಿದಿರುವುದು ಎರಡು ಟೆಸ್ಟ್. ಅದಕ್ಕೆ ಇನ್ನೂ ಒಂದು ವಾರ ಸಮಯವಿದೆ. ಈ ನಡುವೆ ಸಿಗುವ ಮಿನಿ ಬ್ರೇಕ್ ನಲ್ಲಿ ಇಂಗ್ಲೆಂಡ್ ಮತ್ತು ಭಾರತೀಯ ಆಟಗಾರರು ಜಾಲಿಯಾಗಿ ಕಾಲ ಕಳೆಯಲಿದ್ದಾರೆ.

ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ನಲ್ಲೇ ಯುವರಾಜ್ ಸಿಂಗ್ ಮದುವೆ ಪೂರ್ವಭಾವಿ ಕಾರ್ಯಕ್ರಮಗಳು ನಡೆಯಲಿರುವುದರಿಂದ ಕ್ರಿಕೆಟಿಗರು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ತಮ್ಮ ತಮ್ಮ ಮನೆಗೆ ತೆರಳಲಿದ್ದಾರೆ.

ಆದರೆ ಇಂಗ್ಲೆಂಡ್ ಆಟಗಾರರು ಭಾರತೀಯ ಕ್ರಿಕೆಟಿಗನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಡೌಟು. ಹೀಗಾಗಿ ಅವರು ಸ್ವಲ್ಪ ರಿಲ್ಯಾಕ್ಸ್ ಆಗಲು ದುಬೈಗೆ ಹಾರಲಿದ್ದಾರೆ. ಈ ಬ್ರೇಕ್ ನ ನಂತರವಾದರೂ ಚೆನ್ನಾಗಿ ಆಡಲು ಉತ್ಸಾಹ ಬರಲಿ ಎನ್ನುವುದು ಇಂಗ್ಲೆಂಡ್ ತಂಡದವರ ನಿರೀಕ್ಷೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯ ಆರು ವಾರ ಕ್ರಿಕೆಟ್ ನಿಂದ ದೂರ