Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಭಾರತ

ಮತ್ತೊಮ್ಮೆ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಭಾರತ
London , ಭಾನುವಾರ, 25 ಜೂನ್ 2017 (08:19 IST)
ಲಂಡನ್: ಕ್ರಿಕೆಟಿಗರು ಮಾಡದ ಸಾಧನೆಯನ್ನು ಭಾರತದ ಹಾಕಿ ತಂಡ ಪಾಕಿಸ್ತಾನದ ವಿರುದ್ಧ ಮಾಡಿ ತೋರಿಸಿದೆ. ಸತತ ಎರಡನೇ ಬಾರಿ ಪಾಕ್ ವಿರುದ್ಧ ವಿಶ್ವ ಹಾಕಿ ಲೀಗ್  ಕೂಟದಲ್ಲಿ ಸೋಲುಣಿಸಿದೆ.

 
ಶನಿವಾರ ನಡೆದ ಪಂದ್ಯದಲ್ಲಿ ಪಾಕ್ ತಂಡವನ್ನು ಭಾರತೀಯ ಹುಡುಗರು 6-1 ಅಂತರದಿಂದ ಭರ್ಜರಿಯಾಗಿ ಸೋಲಿಸಿ ಮುಂದಿನ ಹಂತಕ್ಕೆ ಬಡ್ತಿ ಪಡೆದಿದೆ. ಭಾರತದ ಪರ ರಮಣ್ ದೀಪ್ ಸಿಂಗ್  ಮತ್ತು ಮನ್ ದೀಪ್ ಸಿಂಗ್ ತಲಾ ಎರಡು ಗೋಲು ಹಾಗೂ ಹರ್ಮನ್ ಪ್ರೀತ್ ಮತ್ತು ತಲ್ವಿಂದರ್ ಸಿಂಗ್ ತಲಾ ಒಂದು ಗೋಲು ಭಾರಿಸಿ ಮಿಂಚಿದರು.

ಕಳೆದ ಭಾನುವಾರ ನಡೆದ ಪಂದ್ಯದಲ್ಲೂ ಭಾರತ ಪಾಕ್ ತಂಡವನ್ನು 7-1 ಅಂತರದಿಂದ ಸೋಲಿಸಿತ್ತು. ಇದು ಕೂಟದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭಾರತದ ಎರಡನೇ ಗೆಲುವಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಕೆನಡಾ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ಬರೆದ ಮಿಥಾಲಿ ರಾಜ್