Select Your Language

Notifications

webdunia
webdunia
webdunia
webdunia

ಕುಸ್ತಿಪಟು ಯೋಗೇಶ್ವರ್ ದತ್ ಆಯ್ತು, ಇದೀಗ ಒಲಿಂಪಿಕ್ಸ್ ಪದಕ ವಿಜೇತ ವಿಜಯ್ ಕುಮಾರ್ ಮದುವೆ ಸುದ್ದಿ

ಕುಸ್ತಿಪಟು ಯೋಗೇಶ್ವರ್ ದತ್ ಆಯ್ತು, ಇದೀಗ ಒಲಿಂಪಿಕ್ಸ್ ಪದಕ ವಿಜೇತ ವಿಜಯ್ ಕುಮಾರ್ ಮದುವೆ ಸುದ್ದಿ
NewDelhi , ಮಂಗಳವಾರ, 17 ಜನವರಿ 2017 (11:25 IST)
ನವದೆಹಲಿ: ಆದರ್ಶದಾಯಕವಾಗಿ ಮದುವೆಯಾಗಿ ಸುದ್ದಿಯಾದ ಯೋಗೇಶ್ವರ್ ದತ್ ವಿಷಯ ಮುಗಿಯಿತು. ಇದೀಗ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಶೂಟರ್ ವಿಜಯ್ ಕುಮಾರ್ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗುತ್ತಿದ್ದಾರೆ.

ವಿಜಯ್ ಕೈ ಹಿಡಿಯುತ್ತಿರುವ ಹುಡುಗಿ ಪ್ರಿಯಾಂಕ ಶರ್ಮಾ ಶಾಲೆ ಟೀಚರ್. ಹಿಮಾಚಲ ಪ್ರದೇಶದಲ್ಲಿ ಜನವರಿ 22 ರಂದು ಇವರಿಬ್ಬರ ವಿವಾಹ ಸರಳವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 31 ವರ್ಷದ ವಿಜಯ್ ಕುಮಾರ್ ಫೆಬ್ರವರಿ ಕೊನೆಯಲ್ಲಿ ಸೇನೆಯಿಂದ ನಿವೃತ್ತರಾಗಲಿದ್ದಾರೆ.

2001 ರಿಂದ ವಿಜಯ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಕುಸ್ತಿಪಟು ಯೋಗೇಶ್ವರ್ ದತ್ ನಿನ್ನೆಯಷ್ಟೇ ಹರ್ಯಾಣದಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ವರದಕ್ಷಿಣೆ ಪಡೆಯದೇ ಇರುವ ಕಾರಣಕ್ಕೆ ಯೋಗೇಶ್ವರ್ ವಿವಾಹ ಸುದ್ದಿಯಾಗಿತ್ತು. ಆದರೆ ಈ ವಿವಾಹಕ್ಕೆ ಬಂದ ಹರ್ಯಾಣ ಮುಖ್ಯಮಂತ್ರಿ ಯೋಗೇಶ್ವರ್ ಊರಿನ ಅಭಿವೃದ್ಧಿಗೆ 10 ಕೋಟಿ ರೂ. ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಸರಣಿಗೆ ಆಸ್ಟ್ರೇಲಿಯಾ ಪರ ಆಡಲಿರುವ ಟೀಂ ಇಂಡಿಯಾ ಮಾಜಿ ಸ್ಪಿನ್ನರ್!