ಆರಂಭದಲ್ಲಿ ಹಿರಿಯ ಆಟಗಾರರನ್ನು ಕಡೆಗಣಿಸಿದ ನಂತರ ಭಾರತದ ರಕ್ಷಣಾತ್ಮಕ ಆಟಗಾರ ದಿಲೀಪ್ ಟಿರ್ಕೇ ಮುಂದಿನ ನಾಲ್ಕು ವರ್ಷಗಳಿಗಾಗಿನ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಾಗಿ ಹೊರಡಿಸಲಾದ ಪರಿಷ್ಕೃತ ಪಟ್ಟಿಯಲ್ಲಿ ಸೇರಿಸಲಾದ 11 ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
2010 ಕಾಮನ್‌ವೆಲ್ತ್ ಗೇಮ್ಸ್, 2010 ಏಷಿಯಾ ಗೇಮ್ಸ್ ಮತ್ತು 2012 ಲಂಡನ್ ಒಲಿಂಪಿಕ್ಸ್‌ನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾದ 48 ಸಂಭಾವಿತ ಆಟಗಾರರ ಪಟ್ಟಿಯಿಂದ ಹಿರಿಯ ಆಟಗಾರರನ್ನು ಕೈ ಬಿಟ್ಟಿದ್ದಕ್ಕಾಗಿ ತೀವ್ರ ತರದ ಟೀಕೆಗೊಳಗಾದ ತಾತ್ಕಾಲಿಕ ಆಯ್ಕೆ ಸಮಿತಿ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪರಿಷ್ಕರಿಸಿ, ದಿಗ್ಗಜ ಆಟಗಾರರಿಗೆ ದಾರಿ ಮಾಡಿಕೊಡಲು 11 ಆಟಗಾರರನ್ನು ಕಿರಿಯರ ವಿಭಾಗಕ್ಕೆ ವರ್ಗಾಯಿಸಿದರು.
ಈ ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದ ಇತರರಲ್ಲಿ, ಮಿಡ್-ಫೀಲ್ಡರ್ ಬಿಮಲ್ ಲಕ್ರಾ, ಇಗ್ನೇಸ್ ಟಿರ್ಕೇ ಮತ್ತು ವಿಎಸ್ ವಿನಯ್, ದೀಪಕ್ ಠಾಕುರ್ ಮತ್ತು ಭಾರತ್ ಚಿಕಾರಾ ಸೇರಿದ್ದಾರೆ.
ಡ್ರಾಗ್ ಪ್ಲಿಕ್ಕರ್ ದಿವಾಕರ್ ರಾಮ್, ಇನ್ನಸೆಂಟ್ ಕುಲ್ಲು, ಮಂಜೀತ್ ಕುಲ್ಲು, ರಂಜೀತ್ ಸಿಂಗ್, ಬಿರೇಂದರ್ ಲಾಕ್ರಾ ಜೂನಿಯರ್, ಅಮರ್ದೀಪ್ ಇಕ್ಕ, ವಿಕಾಸ್ ಶರ್ಮಾ, ವಿವೇಕ್, ಜಗ್ವಂತ್ ಸಿಂಗ್, ಪ್ರಮೋದ್ ಕುಮಾರ್ ಮತ್ತು ಮಂದೀಪ್ ಅಂಟಿಲ್ ಜೂನಿಯರ್ ವಿಭಾಗಕ್ಕೆ ವರ್ಗಾಯಿಸಲ್ಪಟ್ಟ ಆಟಗಾರರಾಗಿದ್ದಾರೆ.