Select Your Language

Notifications

webdunia
webdunia
webdunia
webdunia

ಪ್ರಗತಿಯ ಮೆಟ್ಟಿಲಿನಲ್ಲಿ ಎಡವಿದ ಸಾನಿಯಾ: ವಿಜಯ್ ಅಮೃತರಾಜ್

ಪ್ರಗತಿಯ ಮೆಟ್ಟಿಲಿನಲ್ಲಿ ಎಡವಿದ ಸಾನಿಯಾ: ವಿಜಯ್ ಅಮೃತರಾಜ್
ನವದೆಹಲಿ , ಶುಕ್ರವಾರ, 8 ಫೆಬ್ರವರಿ 2008 (12:30 IST)
ಬೆಂಗಳೂರು ಓಪನ್ ಪಂದ್ಯಾವಳಿಯಲ್ಲಿ ಆಡದೆ ಇರಲು ತೀರ್ಮಾನಿಸಿರುವ ಸಾನಿಯಾ ಮಿರ್ಜಾ ಗೆಲುವಿನ ಮೆಟ್ಟಿಲಿನಲ್ಲಿ ಎಡವಿದ್ದಾರೆ ಎಂದು ಮಾಜಿ ಡೇವಿಸ್ ಕಪ್ ತಂಡದ ನಾಯಕರಾಗಿದ್ದ ವಿಜಯ್ ಅಮೃತರಾಜ್ ಅವರು ಹೇಳಿದ್ದಾರೆ.

ವಿವಾದಗಳಿದ ನೊಂದಿರುವ ನಾನು ಬೆಂಗಳೂರಿನಲ್ಲಿ ನಡೆಯಲಿರುವ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯಲ್ಲಿ ಆಡುವುದಿಲ್ಲ ಎಂದು ಸಾನಿಯಾ ಮಿರ್ಜಾ ಹೇಳಿಕೆ ನೀಡಿದರ ಬೆನ್ನಿಗೆ ಹಲವರ ವಿವಿಧ ರೀತಿಯಲ್ಲಿ ಪ್ರತಿಕ್ರೀಯಿಸಿದ್ದರು.

ಅವರ ಈ ನಿರ್ಧಾರಕ್ಕೆ ಉತ್ತರ ನೀಡಿದ ಮಾಜಿ ಆಟಗಾರರಾಗಿರುವ ವಿಜಯ ಅಮೃತರಾಜ್,ಸಾನಿಯಾ ಅವರು ಈ ಪಂದ್ಯಾವಳಿಯಿಂದ ಹೊರಗುಳಿಯುವ ಮೂಲಕ ದುಡುಕಿನ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ಅವರು ಹಲವು ಹಿರಿಯ ಆಟಗಾರರರನ್ನು ಸೋಲಿಸುವ ಅವಕಾಶವನ್ನು ಕಳೆದುಕೊಂಡಿರುವುದಲ್ಲದೆ, ಸ್ಥಾನಪಟ್ಟಿಯಲ್ಲಿ ಮೇಲಕ್ಕೇರುವ ಸುವರ್ಣವಕಾಶವನ್ನು ತಪ್ಪಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ದೇಶಿಯ ಕ್ರೀಡಾ ಕೂಟದಲ್ಲಿ ಆಡುವುದು ಯಾವುದೇ ಕ್ರೀಡಾಳಿಗೆ ಒಂದು ಉತ್ತಮ ಅನುಭವ. ಕ್ರೀಡಾಳುವಾಗಿರುವರು ಅದನ್ನು ಕಳೆದುಕೊಳ್ಳಲೇಬಾರದು. ಇದೇ ರೀತಿ ಸಾನಿಯಾ ಕೂಡಾ, ಅದಲ್ಲದೆ ಸಾನಿಯಾ ಆಸ್ಟ್ರೇಲಿಯಾ ಓಪನ್‌ನಲ್ಲಿ ಉತ್ತಮ ಸಾಧನೆ ತೋರಿದ್ದು, ಭಾರತದಲ್ಲಿ ಅವರಿಗೆ ಹಲವು ಅಗ್ರ ಆಟಗಾರರನ್ನು ಸೋಲಿಸುವ ಅವಕಾಶವಿತ್ತು ಎಂದು ಹೇಳಿದ್ದಾರೆ.

ಸಾನಿಯಾ ಅವರು, ಅವರಿಗೇನು ಒಳ್ಳೆಯದು ಎಂಬುದನ್ನು ತಿಳಿಯುವ ಅವಶ್ಯಕತೆ ಇದೆ, ಅವರೋರ್ವ ಉತ್ತಮ ಟೆನಿಸ್ ಆಟಗಾರ್ತಿಯಾಗಿರುವ ಕಾರಣ ಅಗ್ರ 20 ಒಳಗೆ ಸ್ಥಾನ ಪಡೆಯುವಲ್ಲಿ ಚಿಂತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅವರು ಭಾರತದಲ್ಲಿ ಆಗುವ ಪಂದ್ಯಗಳನ್ನು ಕಳೆದುಕೊಳ್ಳುವುದು ನಿರರ್ಥಕ ಎಂದು ಹೇಳಿದರು.

ಸಾನಿಯಾ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ವಿನೆಸ್ ವಿಲಿಯಮ್ಸ್ ಅವರಂತಹ ಅಗ್ರ ಆಟಗಾರರು ಆಡುತ್ತಿರುವಾಗ ಸಾನಿಯಾ ಈ ಪಂದ್ಯವನ್ನು ಬಿಡುವುದು ಸರಿಯಲ್ಲ. ಸ್ವದೇಶದ ಅಭಿಮಾನಿಗಳ ಮುಂದೆ ಆಡುವ ಅನುಭವಕ್ಕಿಂತ ದೊಡ್ಡ ಅನುಭವ ಒರ್ವ ಕ್ರೀಡಾಳುಗಳಿಗೆ ಬೇರೆಲ್ಲೂ ಸಿಗದು. ಭಾರತೀಯರೆಲ್ಲರೂ ಸಾನಿಯಾ ಅಗ್ರ 20 ರ ಸ್ಥಾನದೊಳಗೆ ಬರುವುದನ್ನು ನಿರೀಕ್ಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿನಲ್ಲಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಸಲಹೆ ಮಾಡಿದರು.

Share this Story:

Follow Webdunia kannada