Select Your Language

Notifications

webdunia
webdunia
webdunia
webdunia

ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡ ಪೇಸ್

ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡ ಪೇಸ್
ನವದೆಹಲಿ , ಶನಿವಾರ, 9 ಫೆಬ್ರವರಿ 2008 (12:08 IST)
'ನಾನು ಉಜ್ಬೇಕಿಸ್ಥಾನದ ವಿರುದ್ಧ ಸಿಂಗಲ್ಸ್ ಆಡಲು ಫಿಟ್' ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಪ್ರಕಾಶ್ ಅಮೃತರಾಜ್‌ರನ್ನು' ಲಿಯಾಂಡರ್ ಪೇಸ್ ಅವವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಡೇವಿಸ್ ಕಪ್‌‌ನಲ್ಲಿ ಉಜ್ಬೇಕಿಸ್ಥಾನದ ವಿರುದ್ಧ ಆಡಲು ನಾನು ಸಮರ್ಥನಾಗಿದ್ದೇನೆ ಎಂದು ಪ್ರಕಾಶ್ ಅಮೃತರಾಜ್ ಮಾದ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ಕಸಿವಿಸಿಗೊಂಡ ಭಾರತ ತಂಡದ ಆಡದ ನಾಯಕರಾಗಿರುವ ಪೇಸ್, ಪ್ರಕಾಶ್ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರಕಾಶ್ ಅಮೃತರಾಜ್ ಅವರು ಹೊಟ್ಟೆನೋವಿನಿಂದ ಬಳಲುತ್ತಿರುವ ಕಾರಣ ಡೇವಿಸ್ ಕಪ್‌ನಲ್ಲಿ ಉಜ್ಬೇಕಿಸ್ಥಾನದ ವಿರುದ್ಧ ಸಿಂಗಲ್ಸ್ ಆಡಲು ಅವರ ಬದಲಿಗೆ ಸೋಮ್‌ದೇವ್ ಶರ್ಮನ್ ಅವರನ್ನು ಆಯ್ಕೆ ಮಾಡಿದ್ದರು. ಆದರೆ ವಿಶ್ರಾಂತಿ ಬಳಿಕ ಶನಿವಾರ ನಡೆಯಲಿರುವ ಡಬಲ್ಸ್‌ನಲ್ಲಿ ಅವಕಾಶ ನೀಡಲಾಗಿದೆ.

ಪ್ರಕಾಶ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಪೇಸ್ ಅವರು ಈ ಪಂದ್ಯಾವಳಿಯ ಸಿಗಲ್ಸ್‌‍‌‌‌‌ಗೆ ಅನರ್ಹರಾಗಿರುವುದನ್ನು ವೈದ್ಯರು ದೃಡೀಕರಿಸಿದ್ದಾರೆ. ಆಡಿದರೆ ಅದು ಅವರಿಗೆ ಅಪಾಯ. ಈ ನಿಟ್ಟಿನಲ್ಲಿ ಒಂದು ದಿನದ ವಿಶ್ರಾಂತಿ ಬಳಿಕ ಶನಿವಾರ ನಡೆಯಲಿರುವ ಡಬಲ್ಸ್‌ಗೆ ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಪೇಸ್ ದೃಢಪಡಿಸಿದರು.

ನೀವು ಫಿಟ್ ಎಂದಾದರೆ ಅವಕಾಶಕ್ಕಾಗಿ ಕೇಳಬಹುದು. ಆದರೆ ಎಲ್ಲಂದರಲ್ಲಿ ಹೇಳುವುದಲ್ಲ. ತಂಡದ ನಾಯಕನಾಗಿ ನನಗೂ ಸ್ವಲ್ಪ ಜವಾಬ್ದಾರಿಯಿದೆ. ಅದನ್ನು ನಾನು ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಸಾರ್ವಜನಿಕರ ಟೀಕೆಗಳಿಗೆ ತಯಾರಾಗಿರಬೇಕು ಎಂದು ಖಾರವಾಗಿ ನುಡಿದಿದ್ದಾರೆ.

Share this Story:

Follow Webdunia kannada