ಕೊರಿಯಾದ ಇಚೆನಾದರಲ್ಲಿ ಮಾರ್ಚ್18 ರಿಂದ 23 ರ ತನಕ ನಡೆಯಲಿರುವ ಒಲಂಪಿಕ್ ಅರ್ಹತಾ ಸುತ್ತಿನ ಏಷ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ಭಾರತದಿಂದ 14 ಮಂದಿಯ ತಂಡವು ತೆರಳಲಿದೆ.
ಆಯ್ಕಾ ಸಮಿತಿಯ ಸದಸ್ಯರುಗಳಾದ ಜಿ.ಎಸ್ ಮಂದೇರ್, ರಾಜ್ ಸಿಂಗ್,ಕತಾರ್ ಸಿಂಗ್ ಅವರು ಸಭೆ ಸೇರಿ ತಂಡವನ್ನು ಪ್ರಕಟಗೊಳಿಸಿದ್ದಾರೆ.
ಪಂದ್ಯಗಳು ಫ್ರೀ ಸ್ಟೈಲ್ ಮತ್ತು ಗ್ರೀಕೋ ಎನ್ನುವ ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ತೂಕದ ಆಧಾರದಲ್ಲಿ 14 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ತಂಡ
ಫ್ರೀ ಸ್ಟೈಲ್ - ವಿನೋದ್ ಕುಮಾರ್(55ಕೆಜಿ),ಯೋಗೇಶ್ವರ್ ದತ್ತ್(60), ಸುಶಿಲ್ ಕುಮಾರ್(66), ಪರಮ್‌ಜಿತ್(75), ಪ್ರವೀಣ್ ಶಿವಾಲೇ(84), ನವೀನ್ ಮೋರ್(96), ರಾಜೇಶ್ ಥೋಮರ್(120).
ಗ್ರೀಕೋ -ರಾಜೇಂದ್ರ(55 ಕೆ.ಜಿ), ರವಿಂದರ್(60), ಗುರುಬಿಂದರ್ ಸಿಂಗ್(66), ನರೇಶ್ ಕುಮಾರ್(74), ಮಂಜಿತ್(84), ಅಶೋಕ್ ಕುಮಾರ್(96), ಪರವಿಂದರ್ ಸಿಂಗ್(120).
ಪಿ.ಆರ್.ಸೋಂದಿ ಮತ್ತು ವಿನೋದ್ ಕುಮಾರ್ ಫ್ರೀ ಸ್ಟೈಲ್ ವಿಭಾಗಕ್ಕೆ ಕೋಚ್ ಆಗಿದ್ದರೆ,ಎ.ಎನ್ ಯಾದವ್ ಮತ್ತು ಮಹಬೀರ್ ಪ್ರಸಾದ್ ಅವರು ಗ್ರೀಕೋ ರೋಮನ್ ವಿಭಾಗಕ್ಕೆ ಕೋಚ್ ಆಗಿದ್ದಾರೆ.