Select Your Language

Notifications

webdunia
webdunia
webdunia
webdunia

ರಿಯೊ ಒಲಿಂಪಿಕ್ ಅಧಿಕಾರಿಗಳನ್ನು ಹದ್ದುಗಳೆಂದು ಕರೆದ ಸಂಸದ ಪರೇಶ್ ರಾವಲ್

ರಿಯೊ ಒಲಿಂಪಿಕ್ ಅಧಿಕಾರಿಗಳನ್ನು ಹದ್ದುಗಳೆಂದು ಕರೆದ ಸಂಸದ ಪರೇಶ್ ರಾವಲ್
ನವದೆಹಲಿ , ಮಂಗಳವಾರ, 23 ಆಗಸ್ಟ್ 2016 (17:20 IST)
ಭಾರತದ ಒಲಿಂಪಿಕ್ ಕ್ರೀಡಾಧಿಕಾರಿಗಳನ್ನು ಹದ್ದುಗಳೆಂದು ಬಿಜೆಪಿ ಸಂಸದ ರಾವಲ್ ತೀಕ್ಷ್ಣ ದಾಳಿ ಮಾಡಿದ್ದಾರೆ. ಇತ್ತೀಚೆಗೆ ಮುಗಿದ ರಿಯೊ ಒಲಿಂಪಿಕ್ಸ್‌ನಲ್ಲಿ ಮಾಧ್ಯಮವು ಭಾರತದ ಕ್ರೀಡಾಧಿಕಾರಿಗಳ ಉದಾಸೀನತೆ ಕುರಿತು ವರದಿ ಮಾಡಿದೆ. ಆದರೆ ಸೋಮವಾರ ಮ್ಯಾರಥಾನ್ ಓಟಗಾರ್ತಿ ಒಪಿ ಜೈಶಾ ತನಗೆ ಸಾಕಷ್ಟು ನೀರನ್ನು ಮ್ಯಾರಥಾನ್ ಸಂದರ್ಭದಲ್ಲಿ ಪೂರೈಕೆ  ಮಾಡಿಲ್ಲವೆಂದು ದೂರಿದ ಬಳಿಕ ಇನ್ನೊಂದು ಕಥೆ ಬೆಳಕಿಗೆ ಬಂದಿದೆ.

ಮ್ಯಾರಥಾನ್‌ನಲ್ಲಿ ಜೈಶಾ ಓಡುವಾಗ, ಭಾರತದ ಡೆಸ್ಕ್‌ಗಳು ಹಾದುಹೋಗಿದ್ದವು. ಆದರೆ 42 ಡಿಗ್ರಿ ತಾಪಮಾನದ ಉಷ್ಣತೆಯಲ್ಲಿ ಅವರಿಗೆ ಕುಡಿಯಲು ನೀರು ಅಥವಾ ಚೈತನ್ಯ ತುಂಬುವ ಪಾನೀಯವನ್ನು ಒದಗಿಸಲು ಆ ಡೆಸ್ಕ್‌ಗಳಲ್ಲಿ ಯಾರೂ ಇರಲಿಲ್ಲ.
 
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಪರೇಶ್ ರಾವಲ್ ಭಾರತದ ಕ್ರೀಡಾಧಿಕಾರಿಗಳನ್ನು ಹದ್ದುಗಳು ಎಂದು ಪರಿಗಣಿಸಿದ್ದಾರೆ. ಸ್ಪರ್ಧಿ ರಾಷ್ಟ್ರಗಳು ಪ್ರತಿ 2.5 ಕಿಮೀನಲ್ಲಿ ಡೆಸ್ಕ್ ಇರಿಸಿ ಮ್ಯಾರಥಾನ್ ಓಟಗಾರರಿಗೆ ಪಾನೀಯಗಳನ್ನು ನೀಡಬೇಕು.

ಆದರೆ ಡೆಸ್ಕ್‌ಗಳಲ್ಲಿ ಸಿಬ್ಬಂದಿಯಿಲ್ಲದೇ 8 ಕಿಮೀ ದೂರದಲ್ಲಿ ಇರಿಸುವ ಅಧಿಕೃತ ಒಲಿಂಪಿಕ್ ಕೌಂಟರ್‌ಗಳ ಮೇಲೆ ಜೈಶಾ ಅವಲಂಬಿತರಾದರು. ಮ್ಯಾರಥಾನ್ ಓಟದಲ್ಲಿ 89ನೇ ಸ್ಥಾನ ಪಡೆದ ಜೈಶಾ ಅಂತಿಮ ಗೆರೆಯನ್ನು ಮುಟ್ಟಿ ಅಲ್ಲೇ ಕುಸಿದುಬಿದ್ದರು. ಅವರಿಗೆ ಸಮೀಪದ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ನೀಡಿದ ಬಳಿಕ ಸುಧಾರಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಪಿ.ವಿ. ಸಿಂಧುಗೆ ಟೋಕಿಯೊ ಒಲಿಂಪಿಕ್ಸ್‌ಗೆ ಬೇರೆ ಕೋಚ್ ಹೇಳಿಕೆ : ಟ್ವಿಟರ್‌ನಲ್ಲಿ ಆಕ್ರೋಶ