Select Your Language

Notifications

webdunia
webdunia
webdunia
webdunia

ಪಿ.ವಿ. ಸಿಂಧುಗೆ ಟೋಕಿಯೊ ಒಲಿಂಪಿಕ್ಸ್‌ಗೆ ಬೇರೆ ಕೋಚ್ ಹೇಳಿಕೆ : ಟ್ವಿಟರ್‌ನಲ್ಲಿ ಆಕ್ರೋಶ

ಪಿ.ವಿ. ಸಿಂಧುಗೆ ಟೋಕಿಯೊ ಒಲಿಂಪಿಕ್ಸ್‌ಗೆ ಬೇರೆ ಕೋಚ್ ಹೇಳಿಕೆ :  ಟ್ವಿಟರ್‌ನಲ್ಲಿ ಆಕ್ರೋಶ
ನವದೆಹಲಿ , ಮಂಗಳವಾರ, 23 ಆಗಸ್ಟ್ 2016 (16:48 IST)
ತೆಲಂಗಾಣ ಉಪ ಮುಖ್ಯಮಂತ್ರಿ ಮೊಹಮ್ಮದ್ ಮಹ್ಮೂದ್ ಅಲಿ ಅವರಿಗೆ ಪಿವಿ ಸಿಂಧು ಮತ್ತು ಪುಲ್ಲೇಲಾ ಗೋಪಿಚಂದ್ ಕುರಿತು ನೀಡಿದ ಪ್ರತಿಕ್ರಿಯೆಗಾಗಿ ಟ್ವಿಟರ್‌ನಲ್ಲಿ ಟೀಕೆಯ ಸುರಿಮಳೆ ಹರಿಸಲಾಗಿದೆ. 21 ವರ್ಷದ ಬೆಳ್ಳಿಪದಕ ವಿಜೇತೆ ಸಿಂಧುಗೆ ಸನ್ಮಾನ ಸಮಾರಂಭಕ್ಕೆ ಮುಂಚೆ ವರದಿಗಾರರ ಜತೆ ಮಾತನಾಡಿದ ಅಲಿ, 2020ರ ಟೋಕಿಯೊ ಒಲಿಂಪಿಕ್ಸ್‌ಗಾಗಿ ಸಿಂಧುವಿಗೆ ತರಬೇತಿ ನೀಡಲು ಸರ್ಕಾರ ಉತ್ತಮ ಕೋಚ್ ಹುಡುಕಲಿದೆ ಎಂದು ತಿಳಿಸಿದ್ದರು.
 
ಇಡೀ ದೇಶ ಅವರ ಬಗ್ಗೆ ಹೆಮ್ಮೆಯಿಂದಿದೆ. ಯಾವ ಆಟಗಾರ ಕೂಡ ಅವರ ಮಟ್ಟಕ್ಕೆ ತಲುಪಲು ಆಗಿಲ್ಲ. ತೆಲಂಗಾಣದ ಮಗಳು ಜಗತ್ತಿನಾದ್ಯಂತ ಹೆಸರು ಮಾಡಿದ್ದು ನಮಗೆ ಸಂತೋಷವಾಗಿದೆ. ಪ್ರಸಕ್ತ ಸಿಂಧುವಿನ ಕೋಚ್ ಒಳ್ಳೆಯ ತರಬೇತಿ ನೀಡಿದ್ದಾರೆ. ಆದರೆ ಸಿಂಧುವಿಗೆ ಚಿನ್ನದ ಪದಕ ಗೆದ್ದುಕೊಡಬಲ್ಲ ಕೋಚನ್ನು ನಾವು ಹುಡುಕುತ್ತೇವೆ ಎಂದು ಹೇಳಿದರು.
.
ಗೋಪಿಚಂದ್ ಅವರು ಸೈನಾ ನೆಹ್ವಾಲ್ ಮತ್ತು ಸಿಂಧುವಿಗೆ ತರಬೇತಿ ನೀಡಿದ್ದನ್ನು ಪರಿಗಣಿಸಿದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರೂ ಸಚಿವರ ಕಾಮೆಂಟ್ ಬಗ್ಗೆ ಸಂಪೂರ್ಣ ಶಾಕ್ ಆಗಿದ್ದಾರೆ. ಆಲ್ ಇಂಗ್ಲೆಂಡ್ ಮಾಜಿ ಚಾಂಪಿಯನ್ ಗೋಪಿ ಕಿದಂಬಿ ಶ್ರೀಕಾಂತ್ ಮತ್ತು ಪಾರುಪಲ್ಲಿ ಕಶ್ಯಪ್ ಮುಂತಾದವರಿಗೂ ತರಬೇತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ದ್ರೋಣಾಚಾರ್ಯ ಪ್ರಶಸ್ತಿ: ಕೋಚ್ ರಾಜ್ ಕುಮಾರ್ ಶರ್ಮಾಗೆ ವಿರಾಟ್ ಕೊಹ್ಲಿ ಅಭಿನಂದನೆ