Publish Date: Mon, 17 Jul 2017 (06:30 IST)
Updated Date: Mon, 17 Jul 2017 (06:37 IST)
ಲಂಡನ್:ಸ್ವಿಟ್ಜರ್‌ಲ್ಯಾಂಡ್‌ನ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಪ್ರತಿಷ್ಠಿತ ವಿಂಬಲ್ಡನ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ 8ನೇ ಬಾರಿಗೆ ಈ ಪ್ರಶಸ್ತಿ ಮುದಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಕ್ರೊವೇಶಿಯಾದ ಮರಿನ್ ಸಿಲಿಕ್ ರನ್ನು 6-3, 6-1, 6-4, ನೇರ ಸೆಟ್ ಗಳ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ.
ಈ ಜಯದೊಂದಿಗೆ ಒಟ್ಟು 19 ಗ್ರ್ಯಾಂಡ್ ಸ್ಲ್ಯಾಮ್ಸ್ ಗೆದ್ದ ಕೀರ್ತಿಗೆ ರೋಜರ್ ಪಾತ್ರರಾಗಿದ್ದಾರೆ. ಇದು ಫೆಡರರ್ ಪಾಲಿಗೆ 11ನೇ ವಿಂಬಲ್ಡನ್ ಫೈನಲ್ ಪಂದ್ಯವಾಗಿತ್ತು. ಇದರೊಂದಿಗೆ 8ನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂದಿರುವ ಫೆಡರರ್, ಸೆಂಟರ್ ಕೋರ್ಟ್ ನಲ್ಲಿ ಮಾಜಿ ದಂತಕಥೆಗಳಾದ ಪೀಟ್ ಸಾಂಪ್ರಾಸ್ ಮತ್ತು ವಿಲಿಯಮ್ ರೆನ್ಶಾ ದಾಖಲೆಯನ್ನು ಮುರಿದಿದ್ದಾರೆ.