Select Your Language

Notifications

webdunia
webdunia
webdunia
webdunia

ಸೈನಾ ಆಕ್ರಮಣಕಾರಿ, ಹೋರಾಟದ ಮನೋಭಾವದ ಆಟಗಾರ್ತಿ: ಸಿಂಧು ಪ್ರಶಂಸೆ

ಸೈನಾ ಆಕ್ರಮಣಕಾರಿ, ಹೋರಾಟದ ಮನೋಭಾವದ ಆಟಗಾರ್ತಿ: ಸಿಂಧು ಪ್ರಶಂಸೆ
ನವದೆಹಲಿ: , ಬುಧವಾರ, 24 ಆಗಸ್ಟ್ 2016 (12:57 IST)
ಪಿ.ವಿ. ಸಿಂಧು ಅವರು ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ರಿಯೊ ಒಲಿಂಪಿಕ್ಸ್ ಅಭಿಯಾನದ ಮುಖವಾಗಿ ನೆನಪಿಸಿಕೊಳ್ಳಬಹುದು. ಸೈನಾ ನೆಹ್ವಾಲ್ ಆರಂಭದಲ್ಲಿ ನಿರ್ಗಮಿಸಿದ ಬಳಿಕ ಇಡೀ ರಾಷ್ಟ್ರದ ಪದಕದ ಭರವಸೆ ಅವರ ಮೇಲೆ ಮೂಡಿತ್ತು.
 
 ಸಿಂಧು ಭಾರತದ ಬ್ಯಾಡ್ಮಿಂಟನ್ ಭವಿಷ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಸೈನಾ ಅವರಲ್ಲಿ ಕೂಡ ಬ್ಯಾಡ್ಮಿಂಟನ್ ಪ್ರತಿಭೆ ಕುಂದಿಲ್ಲ. ಇಬ್ಬರೂ ಭಾರತದ ಬ್ಯಾಡ್ಮಿಂಟನ್‌ ಅನ್ನು ಇತ್ತೀಚೆಗೆ ಉತ್ತುಂಗಕ್ಕೆ ಒಯ್ದಿದ್ದು, ಟಾಪ್ 10 ಶ್ರೇಯಾಂಕದಲ್ಲಿ ಇಬ್ಬರೂ ಇದ್ದಾರೆ.
 
ಸೈನಾ ಹೈದರಾಬಾದ್‌ನಲ್ಲಿ ಹೆಚ್ಚಿನ ಭಾಗವನ್ನು ಆಡಿದ್ದರಿಂದ ಭಾರತದ ಇಬ್ಬರು ಬ್ಯಾಡ್ಮಿಂಟನ್ ತಾರೆಯರ ಸಮೀಕರಣ ಕುರಿತು ಅನೇಕ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಸಂದರ್ಶನದ ಸಮಯದಲ್ಲಿ ಸಿಂಧುವನ್ನು ಈ ಕುರಿತು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಅಚ್ಚರಿ ಹುಟ್ಟಿಸುತ್ತದೆ. ಸೈನಾ ನೆಹ್ವಾಲ್ ಅವರಲ್ಲಿ ಏನನ್ನು ಇಷ್ಟಪಡುತ್ತೀರಿ ಎಂದು ಕೇಳಿದಾಗ ಸೈನಾ ಆಕ್ರಮಣಕಾರಿ ಆಟವಾಡುತ್ತಾರೆ ಮತ್ತು ಹೋರಾಟದ ಮನೋಭಾವ ತುಂಬಿಕೊಂಡಿದೆ. ಸೈನಾ ಅಷ್ಟು ಸುಲಭವಾಗಿ ಸೋಲಪ್ಪುವುದಿಲ್ಲ ಎಂದು ಸಿಂಧು ಹೇಳಿದರು.

ಸೈನಾ ಜತೆ ಬಾಂಧವ್ಯ ಕುರಿತು ಕೇಳಿದಾಗ ಕೋರ್ಟ್ ಹೊರಗೆ ನಾವು ಸ್ನೇಹಿತರಾಗಿರುತ್ತೇವೆ. ಕೋರ್ಟ್‌ನಲ್ಲಿ ಮಾತ್ರ ಇಬ್ಬರೂ ವೈರಿಗಳಂತೆ ಹೋರಾಟದ ಮನೋಭಾವದಿಂದ ಆಡುತ್ತೇವೆ. ಸೈನಾ ಈಗ ಬೆಂಗಳೂರಿಗೆ ವರ್ಗವಾದ್ದರಿಂದ ಅವರ ಜತೆ ಸಂಪರ್ಕ ಕಡಿದುಹೋಗಿದೆ. ಆದರೂ ಯಾವುದೇ ಪಂದ್ಯದಲ್ಲಿ ಸಿಕ್ಕಾಗ ಉಭಯ ಕುಶಲೋಪರಿ ವಿಚಾರಿಸುತ್ತೇವೆ ಎಂದು ಸಿಂಧು ಹೇಳಿದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ನಸುಗೆಂಪು ಬಣ್ಣದ ಚೆಂಡಿಗಿಂತ ಗಮನಸೆಳೆದದ್ದು ಫ್ಲಡ್‌ಲೈಟ್ ವೈಫಲ್ಯ