Select Your Language

Notifications

webdunia
webdunia
webdunia
webdunia

ನಸುಗೆಂಪು ಬಣ್ಣದ ಚೆಂಡಿಗಿಂತ ಗಮನಸೆಳೆದದ್ದು ಫ್ಲಡ್‌ಲೈಟ್ ವೈಫಲ್ಯ

ನಸುಗೆಂಪು ಬಣ್ಣದ ಚೆಂಡಿಗಿಂತ ಗಮನಸೆಳೆದದ್ದು ಫ್ಲಡ್‌ಲೈಟ್ ವೈಫಲ್ಯ
ಗ್ರೇಟರ್ ನೊಯ್ಡಾ , ಬುಧವಾರ, 24 ಆಗಸ್ಟ್ 2016 (12:01 IST)
ದುಲೀಪ್ ಟ್ರೋಫಿ ಹಗಲು ರಾತ್ರಿ ಉದ್ಘಾಟನಾ ಪಂದ್ಯದಲ್ಲಿ ತಿಳಿಗೆಂಪು ಬಣ್ಣದ ಚೆಂಡನ್ನು ಪ್ರಪ್ರಥಮವಾಗಿ ಬಳಸಿದ್ದರಿಂದ ಮಹತ್ವ ಪಡೆದಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಪಂದ್ಯದಲ್ಲಿ ಆಗಾಗ್ಗೆ ಫ್ಲಡ್‌ಲೈಟ್ ಕೈಕೊಟ್ಟಿದ್ದು ಹೆಚ್ಚು ಗಮನಸೆಳೆಯಿತು.
 
ವಿದ್ಯುತ್ ಅಡಚಣೆಯಿಂದ ಎರಡು ಬಾರಿ ಪಂದ್ಯಕ್ಕೆ ಅಡ್ಡಿಯಾಯಿತು. ಎರಡನೇ ಬಾರಿ ಒಂದೆರಡು ಫ್ಲಡ್‌ಲೈಟ್ ಟವರ್‌ಗಳಲ್ಲಿ ದೀಪಗಳು ಸಂಪೂರ್ಣ ಆರಿಹೋದವು. ಎರಡು ಪ್ರತ್ಯೇಕ ಹಂತಗಳಲ್ಲಿ ಎರಡು ಟವರ್‌ಗಳಲ್ಲಿ ವಿದ್ಯುತ್ ಟ್ರಿಪ್ಪಿಂಗ್‌ನಿಂದಾಗಿ ಒಟ್ಟು 78 ನಿಮಿಷಗಳ ವಿದ್ಯುತ್ ಅಡಚಣೆ ಉಂಟಾಯಿತು. ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಇಂಡಿಯಾ ರೆಡ್ 48.2 ಓವರುಗಳನ್ನು ಆಡಿ 161 ರನ್‌ಗೆ ಬೌಲ್ಡ್ ಆಯಿತು. ಸಂದೀಪ್ ಶರ್ಮಾ 62 ರನ್ ನೀಡಿ 4 ವಿಕೆಟ್ ಕಬಳಿಸಿದರು.
 
 ಎಡಗೈ ಓಪನರ್ ಅಭಿನವ್ ಮುಕುಂದ್ 116 ಎಸೆತಗಳಲ್ಲಿ 77 ರನ್ ಗಳಿಸಿ ನಿಯಂತ್ರಣ ಹೊಂದಿದ್ದರು. ಗ್ರೀನ್ ಟೀಮ್ ಕೂಡ ಅಷ್ಟೇನೂ ಚೆನ್ನಾಗಿ ಆಡದೇ ವೇಗಿ ನಾಥು ಸಿಂಗ್ ಮೇಲಿನ ಕ್ರಮಾಂಕವನ್ನು ತಮ್ಮ ವೇಗ ಮತ್ತು ಸ್ವಿಂಗ್‌ನಿಂದ ಥರಗುಟ್ಟಿಸಿ 36ಕ್ಕೆ 3 ವಿಕೆಟ್ ಕಬಳಿಸಿದರು.
 
ನಸುಗೆಂಪು ಚೆಂಡು ಮಧ್ಯಾಹ್ನದ ಸೆಷನ್‌ಗಿಂತ ಫ್ಲಡ್‌ಲೈಟ್ ಬೆಳಕಿನಲ್ಲಿ ಹೆಚ್ಚು ಸ್ವಿಂಗ್ ಆಗಿದ್ದು ಕಂಡುಬಂತು. ಪಂದ್ಯದ ಸಂದರ್ಭದಲ್ಲಿ ಪಿಂಕ್ ಕೂಕಾಬುರಾ ಚೆಂಡಿನ ಕಡೆ ಸಂಪೂರ್ಣ ಗಮನಹರಿಸಲಾಗಿತ್ತು.  ಪ್ರಥಮ ಇನ್ನಿಂಗ್ಸ್‌ನ 48 ಓವರುಗಳಲ್ಲಿ ಚೆಂಡು ಹೊಳಪನ್ನು ಉಳಿಸಿಕೊಂಡಿತ್ತು. ನಸುಗೆಂಪು ಚೆಂಡಿಗಿಂತ ಇಂಡಿಯಾ ರೆಡ್ ಕಳಪೆ ಬ್ಯಾಟಿಂಗ್‌ನಿಂದ ನಿಯಮಿತ ವೇಳೆಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸುಧಾ ಸಿಂಗ್‌ಗೆ ಹಂದಿ ಜ್ವರ, ಝೀಕಾ ವೈರಸ್ ಸೋಂಕಿಲ್ಲ