Select Your Language

Notifications

webdunia
webdunia
webdunia
webdunia

ಈ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಬದಲು ಹಸುವಿನ ಕರು ಬಹುಮಾನ

Vadodara
ವಡೋದರಾ , ಭಾನುವಾರ, 4 ಜೂನ್ 2017 (19:45 IST)
ವಡೋದರಾ: ಗುಜರಾತ್‌ನ ವಡೋದರಾದಲ್ಲಿ ರಬರಿ ಸಮುದಾಯದಿಂದ ಆಯೋಜನೆಗೊಂಡಿದ್ದ ಕ್ರಿಕೆಟ್‌ ಟೂರ್ನಮೆಂಟ್‌‌ ನಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ರೂಪದಲ್ಲಿ ಹಸುವಿನ ಕರುವನ್ನು ಬಹುಮಾನವಾಗಿ ನೀಡಲಾಗಿರುವುದು ವಿಶೇಷ.
 
ವಿಜೇತ ತಂಡದ ಎಲ್ಲಾ ಸದಸ್ಯರಿಗೆ  'ಗಿರ್' ತಳಿಯ ಹಸುವಿನ ಕರುವನ್ನು ನೀಡಲಾಗಿದೆ. ಇತ್ತೀಚೆಗೆ ದೇಶದಲ್ಲಿ ಗೋಹತ್ಯೆ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಸುವಿನ ಪ್ರಾಮುಖ್ಯತೆ ಹಾಗೂ ಅದರ ಕುರಿತು ಅರಿವು ಮೂಡಿಸಲು ಮುಂದಾಗಿರುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಂಘಟಕರು ತಿಳಿಸಿದ್ದಾರೆ. 
 
ಗುಜರಾತ್‌ನಲ್ಲಿರುವ ರಬರಿ ಸಮುದಾಯ ಜಾನುವಾರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ಹಸುಗಳ ಕುರಿತು ಅರಿವು ಮೂಡಿಸಲು ವಿನೂತನ ಅಭಿಯಾನ ಆರಂಭಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕ್ ಹೈವೋಲ್ಟೇಜ್ ಕದನ: ಟೀಂ ಇಂಡಿಯಾಗೆ ಯೋಧರಿಂದ ಶುಭ ಹಾರೈಕೆ