ಬೆಳ್ಳಿ ಪದಕವನ್ನು ಆಕೆಯಿಂದ ಕಸಿದುಕೊಳ್ಳಲಾಗಿದೆ: ವಿನೇಶ್ ಪರ ಕ್ರಿಕೆಟ್ ದೇವರು ಸಚಿನ್ ಬ್ಯಾಟಿಂಗ್

Sampriya
ಶುಕ್ರವಾರ, 9 ಆಗಸ್ಟ್ 2024 (20:12 IST)
Photo Courtesy X
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರ ಅನರ್ಹತೆಯ ವಿವಾದದ ನಡುವೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಕುಸ್ತಿಪಟು ಪರ ಬ್ಯಾಟಿಂಗ್ ಮಾಡಿದ್ದಾರೆ. ವಿನೇಶ್ ಫೋಗಟ್ ಅವರು, ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹಳು ಎಂದಿದ್ದಾರೆ.

ಬುಧವಾರ ನಡೆದ ಆಘಾತಕಾರಿ ಘಟನೆಯಲ್ಲಿ, 29 ವರ್ಷದ ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್‌ನಲ್ಲಿ ಫೈನಲ್ ಹಂತದ 50ಕೆಜಿ ಕುಸ್ತಿ ಸ್ಪರ್ಧೆಗೂ ಮುನ್ನಾ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಅನರ್ಹಗೊಳಿಸಲಾಯಿತು.

ಒಂದು ದಿನದ ನಂತರ, ವಿನೇಶ್ ಅಂತರಾಷ್ಟ್ರೀಯ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು, ತನಗೆ ಇನ್ನು ಮುಂದೆ ಮುಂದುವರಿಯುವ ಶಕ್ತಿ ಇಲ್ಲ ಎಂದು ಫೋಸ್ಟ್ ಹಂಚಿಕೊಳ್ಳುಬ ಮೂಲಕ ಹೇಳಿದರು.

"ಪ್ರತಿಯೊಂದು ಕ್ರೀಡೆಯು ನಿಯಮಗಳನ್ನು ಹೊಂದಿದೆ ಮತ್ತು ಆ ನಿಯಮಗಳನ್ನು ಸನ್ನಿವೇಶದಲ್ಲಿ ನೋಡಬೇಕು, ಬಹುಶಃ ಕೆಲವೊಮ್ಮೆ ಮರುಪರಿಶೀಲಿಸಬಹುದು. ವಿನೇಶ್ ಫೋಗಟ್ ಫೈನಲ್‌ಗೆ ನ್ಯಾಯೋಚಿತವಾಗಿ ಅರ್ಹತೆ ಪಡೆದರು. ಅಲ್ಲದೆ, ಅರ್ಹ ಬೆಳ್ಳಿ ಪದಕವನ್ನು ಆಕೆಯಿಂದ ಕಸಿದುಕೊಳ್ಳಲಾಗಿದೆ. ವಿನೇಶ್‌ಗೆ ಕ್ರೀಡಾಪ್ರಜ್ಞೆ ಮೆರೆದು ಬೆಳ್ಳಿ ಪದಕ ನೀಡಬೇಕಿತ್ತು ಎಂದು ಹೇಳಿದ್ದಾರೆ.

"ಕಾರ್ಯಕ್ಷಮತೆ ಹೆಚ್ಚಿಸುವ ಔಷಧಿಗಳ ಬಳಕೆಯಂತಹ ನೈತಿಕ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದರೆ ಅದು ಅರ್ಥವಾಗುತ್ತಿತ್ತು. ಆ ಸಂದರ್ಭದಲ್ಲಿ, ಯಾವುದೇ ಪದಕವನ್ನು ನೀಡದಿರುವುದು ಮತ್ತು ಕೊನೆಯ ಸ್ಥಾನವನ್ನು ಪಡೆಯುವುದು ಸಮರ್ಥನೀಯವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬ್ಯಾಟಿಂಗ್ ಮಾಡ್ತಿರೋದು ಯಾರು

ಒಲಿಂಪಿಕ್ಸ್ ಅವಕಾಶ ಕಳೆದುಕೊಂಡ ಪಾಕಿಸ್ತಾನ: ಯಾವೆಲ್ಲಾ ತಂಡಗಳು ಆಯ್ಕೆ

ಸಾಕಪ್ಪಾ ಸಾಕು.. ಮೀಡಿಯಾ ಕಂಡು ಗೆಳೆಯನ ಜೊತೆ ಎಸ್ಕೇಪ್ ಆದ ಸ್ಮೃತಿ ಮಂಧಾನ

IND vs AUS: ಸರಣಿ ಗೆಲ್ಲಲು ಟೀಂ ಇಂಡಿಯಾಗೆ ಇಂದು ಅದ್ಭುತ ಅವಕಾಶ

ಮೊಹಮ್ಮದ್ ಶಮಿಗೆ ಸುಪ್ರೀಂ ನೋಟಿಸ್: ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ

ಮುಂದಿನ ಸುದ್ದಿ
Show comments