Select Your Language

Notifications

webdunia
webdunia
webdunia
webdunia

ಬೀಜಿಂಗ್ ಮತ್ತು ಲಂಡನ್‌ ಒಲಿಂಪಿಕ್ಸ್‌ನಲ್ಲಿ 45 ಡೋಪಿಂಗ್ ವೈಫಲ್ಯ ವರದಿ

ಬೀಜಿಂಗ್ ಮತ್ತು ಲಂಡನ್‌ ಒಲಿಂಪಿಕ್ಸ್‌ನಲ್ಲಿ 45 ಡೋಪಿಂಗ್ ವೈಫಲ್ಯ ವರದಿ
ಜಿನೀವಾ: , ಶುಕ್ರವಾರ, 22 ಜುಲೈ 2016 (18:12 IST)
ಬೀಜಿಂಗ್‌2008ರ ಒಲಿಂಪಿಕ್ಸ್ ಮತ್ತು  ಲಂಡನ್ 2012ರ ಒಲಿಂಪಿಕ್ಸ್‌ನಲ್ಲಿ ಒಟ್ಟು  45 ಉದ್ದೀಪನಾ ಮದ್ದು ಸೇವನೆ ಪರೀಕ್ಷೆಗಳಲ್ಲಿ ವೈಫಲ್ಯವನ್ನು ಐಒಸಿ ವರದಿ ಮಾಡಿದ್ದು,  ಮರುಪರೀಕ್ಷೆ ಕಾರ್ಯಕ್ರಮವನ್ನು ಆರಂಭಿಸಿದ ಬಳಿಕ  ಉದ್ದೀಪನ ಮದ್ದು ಸೇವನೆ ಪರೀಕ್ಷೆ ಪಾಸಿಟಿವ್ ಆಗಿರುವ ಪ್ರಕರಣಗಳ ಸಂಖ್ಯೆ 98ಕ್ಕೆ ಏರಿದೆ. ಐಒಸಿ ಅತೀ ಕೆಟ್ಟ ಡೋಪಿಂಗ್ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕ್ರೀಡಾ ಶಕ್ತಿಕೇಂದ್ರವಾಗಿದ್ದ ರಷ್ಯಾವನ್ನು ರಿಯೊದಿಂದ ನಿಷೇಧಿಸುತ್ತಿದ್ದು, 1200ಕ್ಕೂ ಹೆಚ್ಚು ಮಾದರಿಗಳ ಮರುವಿಶ್ಲೇಷಣೆ ನಡೆಸಿದೆ.
 
ಬೀಜಿಂಗ್ ಸ್ಪರ್ಧಿಗಳಲ್ಲಿ 30 ವ್ಯತಿರಿಕ್ತ ಫಲಿತಾಂಶಗಳು ಬಂದಿದ್ದು, ಲಂಡನ್ 2012 ಕ್ರೀಡಾಪಟುಗಳಲ್ಲಿ 14 ವ್ಯತಿರಿಕ್ತ ಫಲಿತಾಂಶಗಳು ಬಂದಿವೆ.
 
ವಿಶ್ವ ಡೋಪಿಂಗ್ ನಿಗ್ರಹ ಸಂಸ್ಥೆಯ ಎರಡು ವರದಿಗಳಲ್ಲಿ ರಷ್ಯಾ ಪ್ರಾಯೋಜಿತ ಉದ್ದೀಪನ ಮದ್ದು ಸೇವನೆ ವಂಚನೆಯಿಂದ 30 ಕ್ರೀಡೆಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ. ರಷ್ಯಾದ ಟ್ರಾಕ್ ಮತ್ತು ಫೀಲ್ಡ್ ತಂಡವನ್ನು ಈಗಾಗಲೇ ರಿಯೊದಿಂದ ನಿಷೇಧಿಸಲಾಗಿದೆ. ಆದರೆ ಐಒಸಿ ಎಲ್ಲಾ ರಷ್ಯಾದ ಕ್ರೀಡಾಳುಗಳನ್ನು ರಿಯೊ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಬೇಕೆಂದು ಅನೇಕ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು ಒತ್ತಾಯಿಸಿವೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಗಾಲ್ಫ್ ಆಟಗಾರರು ರಿಯೊದಿಂದ ಹಿಂದೆ ಸರಿಯಲು ನಿಜವಾದ ಕಾರಣ ಜೀಕಾ ವೈರಸ್ ಅಲ್ಲ