Select Your Language

Notifications

webdunia
webdunia
webdunia
webdunia

ನಿಶಿಕೋರಿಯನ್ನು ಸೋಲಿಸಿ ಟೊರೊಂಟೊ ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಕೊವಿಕ್

ನಿಶಿಕೋರಿಯನ್ನು ಸೋಲಿಸಿ ಟೊರೊಂಟೊ ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಕೊವಿಕ್
ಒಂಟಾರಿಯೊ: , ಸೋಮವಾರ, 1 ಆಗಸ್ಟ್ 2016 (12:40 IST)
ವಿಶ್ವ ನಂಬರ್ ಒನ್ ನೋವಾಕ್ ಜೋಕೊವಿಕ್ ಜಪಾನ್‌ನ ಕೈ ನಿಶಿಕೋರಿಯನ್ನು 6-3, 7-5ರಿಂದ ಭಾನುವಾರ ಸೋಲಿಸಿ ಟೊರಂಟೊ ಹಾರ್ಡ್‌‍ಕೋರ್ಟ್ ಟೂರ್ನಿಯಲ್ಲಿ  ತಮ್ಮ ವೃತ್ತಿಜೀವನದ 66ನೇ ಸಿಂಗಲ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 
 
ಜೋಕೊವಿಕ್ ಸರಣಿಯಲ್ಲಿ 10-2ರಿಂದ ಸುಧಾರಣೆಯಾಗಿ ನಿಶಿಕೋರಿಯನ್ನು 81 ನಿಮಿಷಗಳಲ್ಲಿ ಸೋಲಿಸಿದರು. ಜೋಕೋವಿಕ್ ಮಾಸ್ಟರ್ಸ್ 1000 ವಿನ್ನರ್ ಪಟ್ಟಿಯಲ್ಲಿ ರಾಫೆಲ್ ನಡಾಲ್‌(28)ಗಿಂತ 2 ಪಾಯಿಂಟ್ ಮುಂದಿದ್ದಾರೆ.
 
ಜಪಾನಿನ ಆಟಗಾರ ನಿಶಿಕೋರಿ ಎರಡನೇ ಸೆಟ್‌ನಲ್ಲಿ ಚೇತರಿಸಿಕೊಂಡು 3-3ರಿಂದ ಸಮಮಾಡಿಕೊಂಡು ಮುಂದಿನ ಆಟದಲ್ಲಿ 4-3ರಿಂದ ಮುನ್ನಡೆ ಸಾಧಿಸಿದ್ದರು.
 
ಆದರೆ ಜೋಕೊವಿಕ್ 6-5ರಿಂದ ಮುಂದುವರಿದು ಪುನಃ ಆಟದಲ್ಲಿ ಮರುಸ್ಥಾಪನೆಯಾಗಿ 7-5ರಿಂದ ಸೆಟ್ ಗೆದ್ದುಕೊಂಡರು. ಫೈನಲ್‌ನಲ್ಲಿ ಸೋಲುವುದು ನಾಚಿಗೆಗೇಡು ಆಗಿದ್ದರೂ ಮುಂದಿನ ವಾರ ನಾನು ಒಲಿಂಪಿಕ್ಸ್‌ಗೆ ಹೋಗುತ್ತಿದ್ದು ಇದೇ ಆಟದ ಗತಿಯನ್ನು ಮುಂದುವರಿಸಲು ಆಶಿಸುವುದಾಗಿ ನಿಶಿಕೋರಿ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಿನ್‌ರನ್ನು ಯಾವುದೇ ವಿಕೆಟ್‌ನಲ್ಲಿ ಎದುರಿಸುವುದು ಕಷ್ಟ: ಸಿಮ್ಮನ್ಸ್