ಫೈನಲ್‌ಗೆ ಲಗ್ಗೆಯಿಟ್ಟ ಮನು ಭಾಕರ್‌: ಭಾರತಕ್ಕೆ ಮತ್ತೊಂದು ಪದಕದ ಭರವಸೆ

Sampriya
ಶುಕ್ರವಾರ, 2 ಆಗಸ್ಟ್ 2024 (17:58 IST)
Photo Courtesy X
ಪ್ಯಾರಿಸ್: ಮನು ಭಾಕರ್ ಈಗ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ತನ್ನ ಮೂರನೇ ಪದಕವನ್ನು ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಮನು ಭಾಕರ್ ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ 25 ಪಿಸ್ತೂಲ್ ಸ್ಪರ್ಧೆಯ ಫೈನಲ್‌ಗೆ ಅರ್ಹತೆಯಲ್ಲಿ 590-24x ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದರು. ಈ ಮೂಲಕ ಭಾಕರ್ ಅವರು ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ನಲ್ಲಿ ಮೂರನೇ ಪದಕದತ್ತ ತನ್ನ ಗುರಿಯಿಟ್ಟಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶೂಟರ್ ಮನು ಭಾಕರ್  ಎರಡು ಪದಕಗಳನ್ನು ಗೆಲ್ಲುವ ಮೂಲಕ  ಹೊಸ ಇತಿಹಾಸ ಬರೆದಿದ್ದಾರೆ.  ಇದೀಗ ಇಂದು ನಡೆದ 25ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ 10m ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10m ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.  ಹರಿಯಾಣದ 22 ವರ್ಷದ ಶೂಟರ್ ಈಗ ಶನಿವಾರ ಮೂರನೇ ಪದಕದತ್ತ ಗುರಿಯಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಲು ಮುರಿದಿದ್ರೂ ಆಡಿದ್ದ ರಿಷಭ್ ಪಂತ್ ನೋಡಿ ಕಲಿಯಿರಿ: ಪಿಚ್ ನೋಡಿ ಡವ್ ಮಾಡಿದ್ರಾ ಶುಭಮನ್ ಗಿಲ್

ಟೀಂ ಇಂಡಿಯಾ ಸೋಲಿನ ಬಳಿಕ ಕೋಲ್ಕತ್ತಾ ಪಿಚ್ ಬಗ್ಗೆ ಗಂಗೂಲಿ ಹೇಳಿಕೆ ವೈರಲ್

ರಾಹುಲ್ ದ್ರಾವಿಡ್, ರೋಹಿತ್ ಕಟ್ಟಿದ ತಂಡವನ್ನು ಕೆಡವಿದ ಗೌತಮ್ ಗಂಭೀರ್: ನೆಟ್ಟಿಗರ ಛೀಮಾರಿ

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

ಮುಂದಿನ ಸುದ್ದಿ
Show comments