ಐಪಿಎಲ್ ನಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ: ಕ್ರಿಸ್ ಗೇಲ್!

Webdunia
ಭಾನುವಾರ, 8 ಮೇ 2022 (14:16 IST)

ನನಗೆ ಸಿಗಬೇಕಾದ ಗೌರವ ಐಪಿಎಲ್ ನಲ್ಲಿ ಸಿಗಲಿಲ್ಲ ಎಂದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಕ್ರಿಸ್ ಗೇಲ್ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಹಾಗಾಗಿ ಅವರು ಐಪಿಎಲ್ ನಿಂದ ಹೊರಗುಳಿಯಬೇಕಾಗಿದೆ. ಬೌಲರ್ ಗಳು ದುಸ್ವಪ್ನವಾಗಿ ಕಾಡುತ್ತಿದ್ದ ಗೇಲ್ ಐಪಿಎಲ್ ನಿಂದ ಹೊರಗುಳಿದಿರುವ ಬಗ್ಗೆ ಮೊದಲ ಬಾರಿ ಬಾಯಿಬಿಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಐಪಿಎಲ್ ನಲ್ಲಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ನೋವಿದೆ ಎಂದು ಗೇಲ್ ಹೇಳಿದ್ದಾರೆ.

ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಕ್ರೀಡೆಗಾಗಿ ಹಾಗೂ ಐಪಿಎಲ್ ಗಾಗಿ ನಾನು ಏನು ಮಾಡಿದ್ದರೂ ಅದು ಯಾವುದೂ ಲೆಕ್ಕಕ್ಕಿಲ್ಲ ಎಂಬುದು ತಿಳಿದಾಗ ಓಕೆ ಅದಕ್ಕೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಸುಮ್ಮನಾದೆ ಎಂದು ಗೇಲ್ ಪ್ರತಿಕ್ರಿಯಿಸಿದ್ದಾರೆ.

ಕ್ರೀಡೆಯ ನಂತರವೂ ಜೀವನ ಇರುತ್ತೆ. ಆದ್ದರಿಂದ ನಾನು ಯಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದಿನ ವರ್ಷ ನಾನು ಮತ್ತೆ ಐಪಿಎಲ್ ಗೆ ಬರುತ್ತೇನೆ. ನನ್ನ ಅಗತ್ಯ ಅವರಿಗೆ ಖಂಡಿತ ಇದೆ ಎಂದು ಗೇಲ್ ವಿಶ್ವಾಸ ವ್ಯಕ್ತಪಡಿಸಿದರು.

ಐಪಿಎಲ್ ನಲ್ಲಿ ನಾನು 3 ತಂಡಗಳ ಪರ ಆಡಿದ್ದೇನೆ. ಅದರಲ್ಲೂ ಕೆಕೆಆರ್ ಮತ್ತು ಆರ್ ಸಿಬಿ ಪರ ಆಡುವಾಗ ತಂಡಕ್ಕೆ ಪ್ರಶಸ್ತಿ ತಂದುಕೊಡಬೇಕು ಎಂದು ತುಂಬಾ ಪ್ರಯತ್ನಪಟ್ಟೆ ಎಂದು ಗೇಲ್ ಹೇಳಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಸಂಜು ಸ್ಯಾಮ್ಸನ್‌ ಅವರನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್‌ ಮತ್ತೊಂದು ಕಠಿಣ ನಿರ್ಧಾರ

ಕಾಲು ಮುರಿದಿದ್ರೂ ಆಡಿದ್ದ ರಿಷಭ್ ಪಂತ್ ನೋಡಿ ಕಲಿಯಿರಿ: ಪಿಚ್ ನೋಡಿ ಡವ್ ಮಾಡಿದ್ರಾ ಶುಭಮನ್ ಗಿಲ್

ಮುಂದಿನ ಸುದ್ದಿ
Show comments