Select Your Language

Notifications

webdunia
webdunia
webdunia
webdunia

4ನೇ ಟೆಸ್ಟ್: ಕುಸಿದ ಭಾರತಕ್ಕೆ ಕೊಹ್ಲಿ ‘ಅರ್ಧ’ ಆಸರೆ

virat kohli
bengaluru , ಗುರುವಾರ, 2 ಸೆಪ್ಟಂಬರ್ 2021 (19:58 IST)
ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಹೊರತಾಗಿಯೂ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕುಸಿತದ ಹಾದಿ
ಹಿಡಿದಿದೆ.
ಓವಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಚಹಾ ವಿರಾಮಕ್ಕೂ ಮುನ್ನ 105 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಭಾರತ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು, ಭೋಜನ ವಿರಾಮದ ವೇಳೆಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿತು.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ರವೀಂದ್ರ ಜಡೇಜಾ 5ನೇ ಕ್ರಮಾಂಕದಲ್ಲಿ ಆಡಲಿಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊಹ್ಲಿ 96 ಎಸೆತಗಳಲ್ಲಿ 8 ಬೌಂಡರಿ ಒಳಗೊಂಡ ಬರೋಬ್ಬರಿ 50 ರನ್ ಬಾರಿಸಿ ನಿರ್ಗಮಿಸಿದರು.
ಇದಕ್ಕೂ ಮುನ್ನ ಕೆಎಲ್ ರಾಹುಲ್ 17, ರೋಹಿತ್ ಶರ್ಮ 11 ಮತ್ತು ರವೀಂದ್ರ ಜಡೇಜಾ 10 ರನ್ ಬಾರಿಸಿದರು. ಇಂಗ್ಲೆಂಡ್ ಪರ ಓಲಿ ರಾಬಿನ್ಸನ್ ಮತ್ತು ಕ್ರಿಸ್ ವೋಕ್ಸ್ ತಲಾ 2 ವಿಕೆಟ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ-ಶಾಸ್ತ್ರಿ ನಿರ್ಧಾರವನ್ನು ‘ನಾನ್ ಸೆನ್ಸ್’ ಎಂದ ಮಾಜಿ ಕ್ರಿಕೆಟಿಗರು