ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

Sampriya
ಶುಕ್ರವಾರ, 25 ಜುಲೈ 2025 (14:25 IST)
Photo Credit X
ನವದೆಹಲಿ:  ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ಗೆ ಭಾರತದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಮತ್ತು ಯುವ ಆಟಗಾರ್ತಿ ದಿವ್ಯಾ ದೇಶಮುಖ್‌ ಲಗ್ಗೆ ಹಾಕಿದ್ದಾರೆ. ಇವರಲ್ಲಿ ಯಾರೇ ಗೆದ್ದರೂ ಭಾರತಕ್ಕೆ ವಿಶ್ವಕಪ್‌ ಕಿರೀಟ ಗ್ಯಾರಂಟಿಯಾಗಲಿದೆ. 

ಶನಿವಾರ ಫೈನಲ್ ಕದನ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಚೆಸ್‌ಗೆ ಒಂದು ಮೈಲಿಗಲ್ಲು ಸೃಷ್ಟಿಸುವ ಕ್ಷಣವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಸ್ಪರ್ಧಿಗಳು ಸೆಮಿಫೈನಲ್‌ ಪ್ರವೇಶಿಸಿದ್ದು ಇದೇ ಮೊದಲಾಗಿತ್ತು. ಅದರ ಬೆನ್ನಲ್ಲೇ ಭಾರತದ ಇಬ್ಬರೂ ಫೈನಲ್‌ ತಲುಪಿದ್ದಾರೆ. 

ಜಾರ್ಜಿಯಾದ ಬಟುಮಿಯಲ್ಲಿ ಗುರುವಾರ ನಡೆದ 2025ರ ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನ ಸೆಮಿಫೈನಲ್ ನಲ್ಲಿ 38 ವರ್ಷದ ಕೋನೇರು ಹಂಪಿ ಅದ್ಬುತ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದರು. ಇದಕ್ಕೂ 19 ವರ್ಷದ ದಿವ್ಯಾ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು.

ಹಂಪಿ ಅವರು ಟೈಬ್ರೇಕ್‌ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ದಂಗುಬಡಿಸಿ ಚೊಚ್ಚಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದರು.

ವಿಶ್ವದ ಮಾಜಿ ನಂಬರ್ 2 ಹಂಪಿ ಮತ್ತೊಂದು ಪ್ರತಿಷ್ಟಿತ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದರೆ, ಉದಯೋನ್ಮುಖ ಆಟಗಾರ್ತಿ ದಿವ್ಯಾ ದೇಶಮುಖ್ ವೃತ್ತಿಜೀವನದ ನಿರ್ಣಾಯಕ ಗೆಲುವಿನೊಂದಿಗೆ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

ಒಂದೇ ತಿಂಗಳಲ್ಲಿ ಭಾರತ ಮಹಿಳೆಯರಿಂದ ಮೂರನೇ ವಿಶ್ವಕಪ್: ಭಾರತ ಈಗ ಕಬಡ್ಡಿ ಚಾಂಪಿಯನ್

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

IND vs SA: 82 ಬಾಲ್, 14 ರನ್.. ಅಬ್ಬಬ್ಬಾ ಕುಲದೀಪ್ ಯಾದವ್ ಗೆ ಏನು ತಾಳ್ಮೆ ಗುರೂ

IND vs SA: ಟೀಂ ಇಂಡಿಯಾಕ್ಕೆ ಟೆಸ್ಟ್ ನಲ್ಲಿ ತವರಿನಲ್ಲೇ ಇಂಥಾ ಸ್ಥಿತಿ ಯಾವತ್ತೂ ಇರಲಿಲ್ಲ

ಮುಂದಿನ ಸುದ್ದಿ
Show comments