Webdunia - Bharat's app for daily news and videos

Install App

ಖೋ ಖೋ ವಿಶ್ವ ವಿಜೇತ ರಾಜ್ಯದ ಕ್ರೀಡಾ ಕಲಿಗಳ ಕೊನೆಗೂ ಕರೆದು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ

Krishnaveni K
ಶುಕ್ರವಾರ, 24 ಜನವರಿ 2025 (17:00 IST)
ಬೆಂಗಳೂರು: ಇತ್ತೀಚೆಗಷ್ಟೇ ನಡೆದ ಪುರುಷ ಮತ್ತು ಮಹಿಳಾ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಭಾಗವಾಗಿದ್ದ ಕನ್ನಡಿಗರಾದ ಬಿ ಚೈತ್ರಾ ಮತ್ತು ಎಂಕೆ ಗೌತಮ್ ಅವರನ್ನು ಇಂದು ಸಿಎಂ ಸಿದ್ದರಾಮಯ್ಯ ಕರೆದು ಸನ್ಮಾನಿಸಿದ್ದಾರೆ.

ಖೋ ಖೋ ವಿಶ್ವಕಪ್ ಗೆದ್ದ ಬೆನ್ನಲ್ಲೇ ಇತರೆ ಕ್ರೀಡಾಪಟುಗಳಂತೇ ನಮ್ಮ ಸಾಧನೆಯನ್ನೂ ಪರಿಗಣಿಸಿ ಎಂದು ಈ ಇಬ್ಬರೂ ಮನವಿ ಮಾಡಿದ್ದರು. ಇದೀಗ ಕೊನೆಗೂ ಸಿಎಂ ಸಿದ್ದರಾಮಯ್ಯ ಇಬ್ಬರನ್ನೂ ತಮ್ಮ ಕಚೇರಿಗೆ ಕರೆದು ಸನ್ಮಾನಿಸಿದ್ದಾರೆ.

2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ  ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ‌ ಪ್ರದರ್ಶನ ನೀಡಿದ  ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ  ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದರು.

ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

Chinnaswamy Stampede: ಚಿನ್ನಸ್ವಾಮಿ ಭೀಕರ ಕಾಲ್ತುಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

RCB Bengaluru stampede: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಸಾವು, ನಮ್ಮ ಮೆಟ್ರೋ ಸ್ಥಗಿತ

RCB Victory Parade: M.ಚಿನ್ನಸ್ವಾಮಿಗೆ ಉಚಿತ ಪಾಸ್‌ಗಳು ಲಭ್ಯ

RCB in Bengaluru: ಆಹಾ ಕೊಹ್ಲಿ ಕೈಯಲ್ಲಿ ಕನ್ನಡ ಬಾವುಟ ನೋಡುವುದೇ ಚಂದ video

ಮುಂದಿನ ಸುದ್ದಿ
Show comments