Select Your Language

Notifications

webdunia
webdunia
webdunia
webdunia

ಏಕದಿನ ಕ್ರಿಕೆಟ್`ನಲ್ಲಿ ಹೊಸ ದಾಖಲೆ ಬರೆದ ಚೀನಾ ಕ್ರಿಕೆಟ್ ತಂಡ

ಏಕದಿನ ಕ್ರಿಕೆಟ್`ನಲ್ಲಿ ಹೊಸ ದಾಖಲೆ ಬರೆದ ಚೀನಾ ಕ್ರಿಕೆಟ್ ತಂಡ
ಥೈಲ್ಯಾಂಡ್ , ಭಾನುವಾರ, 23 ಏಪ್ರಿಲ್ 2017 (13:27 IST)
ತಂತ್ರಜ್ಞಾನದಲ್ಲಿ ಬೆಳೆದಿದ್ದರೂ ಚೀನಾ ತಂಡ ಕ್ರಿಕೆಟ್`ನಲ್ಲಿ ಮಾತ್ರ ಜೀರೋ. ಥೈಲ್ಯಾಂಡ್`ನಲ್ಲಿ ನಡೆದ ವರ್ಲ್ಡ್ ಕ್ರಿಕೆಟ್ ಲೀಗ್ ಪ್ರಾದೇಶಿಕ ಕ್ವಾಲಿಫೈಯರ್ ಪಂದ್ಯದಲ್ಲಿ ಚೀನಾ ಕ್ರಿಕೆಟ್ ತಂಡ ಕೇವಲ 28 ರನ್`ಗಳಿಗೆ ಆಲೌಟ್ ಆಗುವ ಮೂಲಕ 390 ರನ್ ಅಂತರದ ಹೀನಾಯ ಸೋಲನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ತಂಡ 50 ಓವರ್`ಗಳಲ್ಲಿ 418 ರನ್`ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ದೊಡ್ಡ ಗುರಿ ಬೆನ್ನತ್ತಿದ್ದ ಚೀನಾ 12.4 ಓವರ್`ಗಳಲ್ಲಿ 28 ರನ್`ಗಳಿಗೆ ಆಲೌಟ್ ಆಗಿದೆ. ಇದರಲ್ಲಿ ಎಕ್ಸ್ ಟ್ರಾ 13 ರನ್ ಇದೆ. ಬ್ಯಾಟ್ಸ್`ಮನ್`ಗಳು ಹೊಡೆದಿದ್ದು 15 ರನ್ ಮಾತ್ರ.

ಇದುವರೆಗಿನ ಏಕದಿನ ಕ್ರಿಕೆಟ್`ನಲ್ಲಿ 2004ರಲ್ಲಿ ಶ್ರೀಲಂಕಾ ವಿರುದ್ಧ  ಜಿಂಬಾಬ್ವೆ 35 ರನ್`ಗಳಿಗೆ ಆಲವಟ್ ಆಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಚೀನಾ ತಂಡ ಅದನ್ನೂ ಮೀರಿಸಿ ಹೊಸ ದಾಖಲೆ ಬರೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾದಲ್ಲಿ ಆರ್`ಸಿಬಿ-ಕೆಕೆಆರ್ ಬಿಗ್ ಫೈಟ್: ಬೆಂಗಳೂರಿಗೆ ಕನ್ನಡಿಗರ ಸವಾಲ್