Select Your Language

Notifications

webdunia
webdunia
webdunia
webdunia

ಭಾರತ ಫುಟ್ಬಾಲ್ ತಂಡಕ್ಕೆ ಗಿಲ್ ಅಭಿನಂದನೆ

ಭಾರತ ಫುಟ್ಬಾಲ್ ತಂಡಕ್ಕೆ ಗಿಲ್ ಅಭಿನಂದನೆ
ನವದೆಹಲಿ , ಗುರುವಾರ, 14 ಆಗಸ್ಟ್ 2008 (18:33 IST)
ತಜಕೀಸ್ತಾನ್ ತಂಡದ ವಿರುದ್ದ ಎಎಫ್‌ಸಿ ಚಾಲೆಂಜ್‌ ಕಪ್‌ ಪ್ರಶಸ್ತಿಯನ್ನು ಗೆದ್ದ ಭಾರತ ತಂಡವನ್ನು ಅಭಿನಂದಿಸಿರುವ ಕೇಂದ್ರ ಕ್ರೀಡಾ ಸಚಿವ ಎಂ.ಎಸ್‌.ಗಿಲ್, ಫುಟ್ಬಾಲ್ ಆಟಗಾರರು ಭಾರತವು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಫುಟ್ಬಾಲ್ ಆಟಗಾರರನ್ನು ಅಭಿನಂದಿಸಿದ ಸಚಿವ ಗಿಲ್ ಪಂದ್ಯಾವಳಿಯ ಸಂದರ್ಭದಲ್ಲಿ ಅನುಪಸ್ಥಿತರಾಗಿದ್ದುದಕ್ಕೆ ವಿಷಾದ ವ್ಯಕ್ತಪಡಿಸಿ, ತಂಡದ ನಾಯಕ ಬೈಚುಂಗ್ ಭುಟಿಯಾ ಮತ್ತು ಕೋಚ್ ಬಾಬ್ ಹೌಟನ್ ಸೇರಿದಂತೆ ತಂಡದ ಎಲ್ಲ ಆಟಗಾರರು ಅಭಿನಂದನಾರ್ಹರು ಎಂದು ನುಡಿದರು.

1956ರಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿತ್ತು. ಮುಂಬರುವ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಫುಟ್ಬಾಲ್ ತಂಡ ಒಲಿಂಪಿಕ್ಸ್ ಚಿನ್ನದ ಪದಕ ಪಡೆಯಿಲಿ ಎಂದು ಆಶಿಸಿದ ಅವರು ತಂಡದ ಆಟಗಾರರು ಉತ್ತಮ ಆಟದ ಪ್ರದರ್ಶನ ತೋರಿದ್ದಾರೆ ಎಂದು ನುಡಿದರು.

ನಿನ್ನೆ ಬೀಜಿಂಗ್‌‌ನಿಂದ ಭಾರತಕ್ಕೆ ಮರಳಿದ್ದು, ಮೊನಿಕಾ ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯದ ಒತ್ತಡದಲ್ಲಿರುವುದರಿಂದ ಫುಟ್ಬಾಲ್ ಪಂದ್ಯವೀಕ್ಷಣೆಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಗಿಲ್ ತಿಳಿಸಿದರು.

Share this Story:

Follow Webdunia kannada