ಇರಾನ್ ಜೂ. ಓಪನ್: ಆಕಾಂಕ್ಷಾ ಚಾಂಪಿಯನ್
ಏಷ್ಯಾ ಸ್ಕ್ವಾಷ್ ಫೇಡರೇಷನ್ ಸೂಪರ್ ಸಿರೀಸ್ ಸಿಲ್ವರ್ ಈವೆಂಟ್ ಭಾಗವಾದ ಇರಾನ್ ಜೂನಿಯರ್ ಓಪನ್ ಟೂರ್ನಮೆಂಟ್ ಅವರು ಭಾರತದ ಆಕಾಂಕ್ಷಾ ಸಾಲೂಂಖೆ ವಶವಪಡಿಸಿಕೊಂಡಿದ್ದಾರೆ. ಗೋವಾ ಮೂಲದವರರಾದ ಆಕಾಂಕ್ಷಾ ಉತ್ತಮ ನಿರ್ವಹಣೆ ನೀಡುವ ಮೂಲಕ ಫೈನಲ್ ಪಂದ್ಯದಲ್ಲಿ ಕುವೈಟ್ನ ಮಿಯಾ ಮೊಹಮ್ಮದ್ರನ್ನು 11-1, 11-5, 11-4ರ ಅಂತರದಲ್ಲಿ ಮಣಿಸಿ 15 ವರ್ಷದವರೊಳಗಿನ ಬಾಲಕಿಯರ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿಕೊಂಡರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಕಾಂಕ್ಷಾ ಇರಾನ್ನ ಕಾಜೋಲ್ ಶರಾಫು ಅವರನ್ನು ಮಣಿಸಿದ್ದರು. ಇದೀಗ ಚೊಚ್ಚಲ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.