ಸಿಖ್ ಧರ್ಮೀಯರ ಎಂಟನೇ ಗುರುವಾದ ಗುರು ಹರ್ ಕೃಷ್ಣ ಅವರು ತಮ್ಮ ಐದನೇ ವಯಸ್ಸಿನಲ್ಲಿ ಸಿಖ್ ಧರ್ಮದ ಗುರುವೆಂದು ಘೋಷಿಸಿಲ್ಪಟ್ಟರು.
ಸೇವೆ, ಪರಿಶುದ್ದ ಮತ್ತು ಸತ್ಯಗಳು ಸಿಖ್ ಧರ್ಮೀಯರ ಸ್ವರಗಳಾಗಬೇಕೆಂದು ಕರೆ ನೀಡಿದರು.ಜಾತಿ ಭೇಧವೆನ್ನದೇ ಬಡವ ಬಲ್ಲಿದರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಸಿದರು .
ಮುಸ್ಲಿಮ್‌ರು ಹೆಚ್ಚಾಗಿರುವ ಸ್ಥಳಗಳಲ್ಲಿ ಗುರು ಹರ್ ಕೃಷ್ಣ ಅವರ ಸೇವೆಯನ್ನು ಕಂಡು ಅವರನ್ನು ಬಾಲಾ ಪೀರ್ ಎಂದು ಕರೆದರು. ಗುರು ಹರ್ ಕೃಷ್ಣ ಅವರ ಜನಬೆಂಬಲವನ್ನು ಕಂಡ ಮೊಗಲ್ ದೊರೆ ಔರಂಗಜೇಬ್ ಕೂಡಾ ಇವರನ್ನು ಕೆಣಕುವ ಸಾಹಸ ಮಾಡಲಿಲ್ಲ.