Article Sikh Ten Gurus %e0%b2%97%e0%b3%81%e0%b2%b0%e0%b3%81 %e0%b2%b0%e0%b2%be%e0%b2%ae%e0%b3%8d%e2%80%8c%e0%b2%a6%e0%b2%be%e0%b2%b8%e0%b3%8d 107052400047_1.htm

Select Your Language

Notifications

webdunia
webdunia
webdunia
webdunia

ಗುರು ರಾಮ್‌ದಾಸ್

ಗುರು ರಾಮ್‌ದಾಸ್ ಸಿಖ್
WD
ಸಿಖ್ ಧರ್ಮೀಯರ ನಾಲ್ಕನೇ ಗುರುವಾದ ಗುರು ರಾಮ್‌ದಾಸ್‌ರು 1534ರಲ್ಲಿ ಜನಿಸಿದರು. ಸಿಖ್‌ರ ಪವಿತ್ರ ಸ್ಥಳವಾದ ಅಮೃತಸರ್‌ದಲ್ಲಿ ಸ್ವರ್ಣಮಂದಿರದ ನಿರ್ಮಾಣವನ್ನು ಆರಂಭಿಸಿದರು.

ಯಾವುದೇ ಧರ್ಮೀಯರಿರಲಿ, ಸ್ವರ್ಣಮಂದಿರವನ್ನು ಯಾವುದೇ ದಿಕ್ಕಿನಿಂದಲೂ ಪ್ರವೇಶಿಸಬಹುದು.ಇದು ಸಿಖ್‌ ಧರ್ಮೀಯರಿಗೆ ಒಬ್ಬನೇ ದೇವರು ,ಸ್ಥಳ, ದಿಕ್ಕೂ,ಸಮಯದ ಬಗ್ಗೆ ಯಾವುದೇ ಪಕ್ಷಪಾತವಿಲ್ಲ ಎನ್ನುವುದನ್ನು ತೋರಿಸುತ್ತದೆ.ಸಿಖ್‌ರ ಆದರ್ಶಮದುವೆಗೆ ಆನಂದ ಕರಾಜ್‌ ಎಂದು ಹೇಳುತ್ತಾರೆ.ಗುರು ರಾಮ್‌ದಾಸ್‌ಜಿ ಅವರು ನಾಲ್ಕು ಹಂತಗಳಲ್ಲಿ ದೇವರ ಸ್ಥೋತ್ರಗಳನ್ನು ರಚಿಸಿದ್ದು,ಮದುವೆಯ ಹಂತದಲ್ಲಿ ಈ ನಾಲ್ಕು ಹಂತಗಳನ್ನು ಪಠಿಸಲಾಗುತ್ತದೆ.

ಮದುವೆಯ ಮುಖಾಂತರ ಮನೆಯ ಯಜಮಾನ ಪವಿತ್ರ ಸಮ್ಮತಿಯನ್ನು ನೀಡಿರುವುದಕ್ಕೆ ಒಪ್ಪಿಗೆ ಸೂಚಿಸುತ್ತಾರೆ.ಎರಡನೇ ಸುತ್ತಿಗೆ ದಂಪತಿಗಳಾಗಲು ದೇವರು ಆಶಿರ್ವದಿಸಿದ್ದಾನೆ ಎಂದು ಹೇಳಲಾಗುತ್ತದೆ.ಮೂರನೇ ಸುತ್ತಿಗೆ ಸಂತರ ಸಮ್ಮುಖದಲ್ಲಿ ದೇವರನ್ನು ಪ್ರಾರ್ಥಿಸುವ ಅವಕಾಶ ದೊರೆತಿರುವುದಕ್ಕೆ ನಾವು ಅತ್ಯಂತ ಅದೃಷ್ಟಶಾಲಿಗಳು ಎಂದು ಹೇಳಲಾಗುತ್ತದೆ.ನಾಲ್ಕನೇ ಸುತ್ತಿನಲ್ಲಿ ನಮ್ಮ ಬಯಕೆಗಳನ್ನು ಈಡೇರಿಸಿದಕ್ಕಾಗಿ ಧನ್ಯವಾದಗಳು ಹೇಳಲಾಗುತ್ತದೆ.

Share this Story:

Follow Webdunia kannada