Article Sikh Ten Gurus %e0%b2%97%e0%b3%81%e0%b2%b0%e0%b3%81 %e0%b2%a8%e0%b2%be%e0%b2%a8%e0%b2%95%e0%b2%b0%e0%b3%81 107052400044_1.htm

Select Your Language

Notifications

webdunia
webdunia
webdunia
webdunia

ಗುರು ನಾನಕರು

ಗುರು ನಾನಕರು
WD
ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕರು 1469ರಲ್ಲಿ ತಳವಂಡಿಯಲ್ಲಿ (ಪಾಕಿಸ್ತಾನದಲ್ಲಿರುವ ನಾನಕನ್‌ ಸಾಹೀಬ್) ಜನಿಸಿದರು. ಚಿಕ್ಕವರಿರುವಾಗಲೇ ಗುರುನಾನಕರು ಪಂಜಾಬಿ ,ಸಂಸ್ಕ್ರತ, ಪರ್ಷಿಯಾ ಭಾಷೆಗಳನ್ನು ಬಲ್ಲವರಾಗಿದ್ದರು.

ಬಾಲ್ಯದಿಂದಲೇ ಶಾಸ್ತ್ರವಿಧಿ ,ಜಾತಿ,ಪಕ್ಷಪಾತ,ಕಪಟತೆ,ಮೂರ್ತಿ ಪೂಜೆಯ ವಿರುದ್ದವಾಗಿದ್ದರು.ಹಿಂದೂ ಮುಸ್ಲಿಮರು ಸಮಾನರು. ನಾನು ಹಿಂದೂವಲ್ಲ ಅಥವಾ ಮುಸ್ಲಿಂ ಅಲ್ಲ,ದೇವರು ಮತ್ತು ಸತ್ಯದಲ್ಲಿ ನಂಬಿಕೆಯಿಟ್ಟ ಎಲ್ಲರಿಗೂ ಸಹೋದರನಾಗಿದ್ದೇನೆ ಎಂದು ಹೇಳಿದ್ದಾರೆ. ಗುರುನಾನಕರು ತಮ್ಮ ಜೀವನದಲ್ಲಿ ನಾಲ್ಕು ಮುಖ್ಯವಾದ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು.ಭಾರತದಿಂದ ಅರೇಬಿಯಾ ಮತ್ತು ಪರ್ಷಿಯಾ ಮತ್ತು ಮೆಕ್ಕಾ, ಬಾಗ್ದಾದ್‌ ನಗರಗಳಿಗೆ ಭೇಟಿ ನೀಡಿದರು.

ಅವರು ಹಿಂದೂ , ಜೈನರು,ಬುದ್ದಿಷ್ಟರು, ಪಾರ್ಸಿಗಳು, ಮತ್ತು ಮುಸ್ಲಿಂ ಜನರನ್ನು ಉದ್ದೇಶಿಸಿ ಮಂದಿರ , ಮಸೀದಿಗಳಲ್ಲಿ ಉಪದೇಶ ನೀಡಿದರು.ಗುರುನಾನಕರು ಹೋದ ಕಡೆಗಳಲ್ಲಿ ಜಾತಿ,ಪಕ್ಷಪಾತ,ಕಪಟತೆ, ಸತಿ ಸಹಗಮನ ವಿರೋಧಿಸಿ ಕುರಿತು ಉಪದೇಶ ನೀಡುತ್ತಿದ್ದರು.ತಮ್ಮ ಧರ್ಮವನ್ನು ಅನುಸರಿಸುವಂತೆ ಹಿಂಬಾಲಕರಿಗೆ ಅವರು ಎಂದೂ ಕರೆ ನೀಡಲಿಲ್ಲ. ಹಿಂದೂ ,ಮುಸ್ಲಿಮರು ತಮ್ಮ ತಮ್ಮ ಧರ್ಮವನ್ನು ನಿಷ್ಠೆಯಿಂದ ಆಚರಿಸುವಂತೆ ತಿಳಿ ಹೇಳಿದರು.

Share this Story:

Follow Webdunia kannada